Homeಜಿಲ್ಲೆವಿದ್ಯಾರ್ಥಿಗಳಿಗೆ ಯಶಸ್ಸೇ ನಿಜವಾದ ಬೆಳಕು: ಆರುಂಡಿ ಶ್ರೀನಿವಾಸ

ವಿದ್ಯಾರ್ಥಿಗಳಿಗೆ ಯಶಸ್ಸೇ ನಿಜವಾದ ಬೆಳಕು: ಆರುಂಡಿ ಶ್ರೀನಿವಾಸ

Spread the love

ಶಿವಮೊಗ್ಗ ,ಮೇ.6 : ವಿದ್ಯಾರ್ಥಿಗಳಿಗೆ ಯಶಸ್ಸು ನಿಜವಾದ ಬೆಳಕು ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಹೇಳಿದರು.

ನಗರದ ಹೊಯ್ಸಳ ಕಾಲೇಜಿನ ಬುಧವಾರ ವಾರ್ಷಿಕೋತ್ಸವ ಮತ್ತು ಅಂತಿಮ ವರ್ಷದ ಬಿ.ಕಾಂ., ವಿದ್ಯಾರ್ಥಿಗಳಿಗೆ ಆತ್ಮೀಯವಾದ ಬೀಳ್ಕೊಡೊಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಅಂಕೆ ಮುಖ್ಯ. ಜೀವನದಲ್ಲಿ ಕೇವಲ ಅಂಕಗಳು ಮಾತ್ರ ಕೆಲಸ ಮಾಡುವುದಿಲ್ಲ. ಕೌಶಲ್ಯಗಳು ಕೂಡ ಮುಖ್ಯವಾಗುತ್ತವೆ. ಅದರಲ್ಲೂ ಕಾಮರ್ಸ್ ವಿದ್ಯಾರ್ಥಿಗಳು ಪದವಿ ಮುಗಿದ ನಂತರ ವಿವಿಧ ಕೋರ್ಸುಗಳನ್ನು ಹೆಚ್ಚುವರಿಯಾಗಿ ಕಲಿಯಬೇಕಾಗುತ್ತದೆ. ಮತ್ತು ಪ್ರಸ್ತುತ ಎಐನಂತಹ ಕೌಶಲ್ಯಗಳನ್ನು ಕೂಡ ಕಲಿಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ವಿಲಿಯಂ ಡಿಸೋಜ ರವ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮದ ಬಗ್ಗೆ ಹಾಗು ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಅಂಕಣ ಜೊತೆಗೆ ವಿನಯತೆಯು ಕೂಡ ಇರಬೇಕೆಂದು ತಿಳಿಸಿದರು.

ಗಮನಿಸಿ:ಡಾಕ್ಟರೇಟ್ ಪಡೆದ ಕೋಣಂದೂರ ಲಿಂಗಪ್ಪರಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಅಭಿನಂದನೆ

ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಕೆ.ಆರ್.ಶಂಕರ್ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು, ಕಾಲೇಜಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಹಾಗು ವಿದ್ಯಾರ್ಥಿಗಳ ಸಾಧನೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಅವರು ವಿದ್ಯಾಥಿಗಳನ್ನು ಕುರಿತು ಬಂದಿರುವುದನ್ನು ಬಿಡಬೇಡಿ, ಬಾರದೆ ಇರುವುದನ್ನು ಬಯಸಬೇಡಿ ಎಂದು ಹಿತ ವಚನವನ್ನು ಹೇಳಿದರು.

ಕಾಲೇಜಿನ ಕ್ಷೇಮಪಾಲನಾಧಿಕಾರಿ ಸಲ್ಮಾನ್ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕುಮಾರಿ ಜ್ಯೋತಿ ಮತ್ತು ತೇಜಸ್ವಿನಿ ಪ್ರಾಥನೆ ಮಾಡಿದರು. ಕುಮಾರಿ ಆಯೇಷಾ ಮತ್ತು ಕುಮಾರಿ ಅಲ್ಲಿಯ ಕುಬ್ರಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಮುಸ್ಕಾನ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments