Homeಜಿಲ್ಲೆಸಮಾಜದ ಬದಲಾವಣೆ ವಿದ್ಯಾರ್ಥಿಗಳು ಶ್ರಮಿಸಬೇಕು: ಅನಿಲ್ ಡಿ.ಸಹಸ್ರಬುಧೆ

ಸಮಾಜದ ಬದಲಾವಣೆ ವಿದ್ಯಾರ್ಥಿಗಳು ಶ್ರಮಿಸಬೇಕು: ಅನಿಲ್ ಡಿ.ಸಹಸ್ರಬುಧೆ

Spread the love

ಶಂಕರಘಟ್ಟ , ಮೇ.6: ಗ್ರಾಮೀಣ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕೌಶಲ್ಯ ಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಂನ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುಧೆ ಕರೆ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಬುಧವಾರ ಏರ್ಪಡಿಸಿದ್ದ  35 ನೇ ಘಟಿಕೋತ್ಸವದಲ್ಲಿ ಎಲ್ಲರಿಗೂ ನಮಸ್ಕಾರ ಎನ್ನುತ್ತಲೇ  ಕನ್ನಡದಲ್ಲಿಯೇ ಪ್ರಧಾನ ಭಾಷಣ ಅವರು ಆರಂಭಿಸಿದರು.

ಭಾರತವು ಇಂದು ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ನೂರಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಹಾಗೂ ಉದ್ದಿಮೆಗಳ ಪ್ರಮುಖರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ಶೀಘ್ರದಲ್ಲೇ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಭಾರತದ ಸ್ಟಾರ್ಟ್-ಅಪ್ ಪ್ರತಿಭೆಗಳು ಭಾಗವಹಿಸಲಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ ಎಂದರು.

ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಪೂರಕವಾಗಿ ಭಾರತವು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡಲು ಮತ್ತು ಭಾರತವನ್ನು ಜಾಗತಿಕ ಜ್ಞಾನದ ಕೇಂದ್ರವನ್ನಾಗಿಸಲು ಸಹಕಾರಿಯಾಗಿದೆ.

ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ಯುವಜನರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿವೆ ಎಂದ ಅವರು ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ. ಬದಲಾಗಿ ಅದು ಜವಾಬ್ದಾರಿಯುತ ಬದುಕಿನ ಆರಂಭ. ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಇಂದು ಇಂಟರ್ನೆಟ್ ಆಫ್ ಥಿಂಗ್ಸ್  ಅಂತಹ ತಂತ್ರಜ್ಞಾನಗಳು ಸಾಮಾನ್ಯವಾಗುತ್ತಿವೆ. ಕೃಷಿ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡುವುದರಿಂದ ಹಿಡಿದು ಮನೆಯ ಎಸಿ ನಿಯಂತ್ರಿಸುವವರೆಗೆ ಮೊಬೈಲ್ ಬಳಕೆ ಕ್ರಾಂತಿಕಾರಕ ಬದಲಾವಣೆ ತಂದಿದೆ ಎಂದರು.

ಗಮನಿಸಿ:ಸ್ವರ್ಣ ಪದಕ ಬುದ್ದ, ಬಸವ, ಅಂಬೇಡ್ಕರ್ ಗೆ ಅರ್ಪಣೆ

ಭಾರತವು ಇಂದು ಬಾಹ್ಯಾಕಾಶ ವಿಜ್ಞಾನ ಮತ್ತು ಪರಮಾಣು ಶಕ್ತಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಯುವಜನರು ಉದ್ಯೋಗದಾತರಾಗಬೇಕು. ಐಟಿ  ಕ್ಷೇತ್ರದಲ್ಲಿನ ಕ್ರಾಂತಿಯು ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ. ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಸಮಾಜಶಾಸ್ತ್ರ, ಮನೋ ವಿಜ್ಞಾನ ಮತ್ತು ಉದ್ಯಮಶೀಲತೆಯಂತಹ ವಿವಿಧ ಜ್ಞಾನ ಶಾಖೆಗಳ ನಡುವೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದರು.

ಪದವಿ ಮುಖ್ಯವಲ್ಲ, ಕಲಿಕೆ ಮುಖ್ಯವಾಗಿದೆ. ಆದರು ಇಂದು ಶಿಕ್ಷಣ ತಾಂತ್ರಿಕತೆ ರೂಪದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತ ಇದೆ. ಅದನ್ನು ಬಳಸಿಕೊಳ್ಳಿ. ಜಗತ್ತಿನಲ್ಲಿ ಅನೇಕ ಅವಕಾಶಗಳು ಸೃಷ್ಠಿಯಾಗುತ್ತಿದೆ.  ಅದರ ಉಪಯೋಗ ಪಡೆದುಕೊಳ್ಳಿ. ಅಪಾರ್ ಐಡಿ ಕ್ರಿಯೆಟ್ ಮಾಡಿಕೊಳ್ಳಿ ಅದು ಡೈನಾಮಿಕ್ ಸಿವಿ ತರ, ನಿಮ್ಮ ಎಲ್ಲಾ ಮಾಹಿತಿಯು ಅದರಲ್ಲಿ ಸಿಗುತ್ತದೆ . ವಿಕಸಿತ ಭಾರತ ಕನಸು ಕಾಣುತ್ತಿದ್ದೇವೆ 2047 ರಲ್ಲಿ ಅದನ್ನು ಸಾಧಿಸುವತ್ತ ಕನಸು ಕಾಣಬೇಕು. ಶೈಕ್ಷಣಿಕವಾಗಿ ನಿಮಗೆ ಸಹಕಾರವಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments