ಶಿವಮೊಗ್ಗ, ಮೇ.7: ನಮ್ಮ ದೇಶದ ಭೂ ಸೇನೆ, ವಾಯು ಸೇನೆಗಳು ಶತ್ರು ರಾಷ್ಪ್ರದ ಮೇಲೆ ಪರಾಕ್ರಮ ಮೆರೆಯುವ ಮೂಲಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಗೊಳಿಸಿ ಇಂದಿಗೆ ಒಂದು ವರ್ಷ ಪೂರೈಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸಂಭ್ರಮ ವ್ಯಕ್ತಪಡಿಸಿದರು.
ಗುರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವು ಆಪರೇಷ್ ಸಿಂಧೂರ್ ಕಾಯಾಚರಣೆಯ ಮೊದಲ ವಾರ್ಷಿಕ ದಿನದ ಸಂಭ್ರಮದಲ್ಲಿದೆ. ಪಹೆಲ್ಗಾಮ್ ನಲ್ಲಿ 26 ಅಮಾಯಕ ಭಾರತೀಯರನ್ನು ಧರ್ಮ ಕೇಳಿ ಕೃತ್ಯ ನಡೆಸಿದ ಉಗ್ರವಾದಿಗಳಿಗೆ ತಕ್ಕ ಉತ್ತರ ನೀಡಿದ ದಿನ ಇದಾಗಿದೆ. ಇದು ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಮಾತ್ರವಾಗದೆ ಭಾರತ ದೇಶವನ್ನು ಕೆಣಕಿದ ಶತ್ರುಗಳನ್ನು ನಿರ್ನಾಮ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಸಂಕಲ್ಪವು ಆಗಿತ್ತು. ಅದರಂತೆ ಭಾರತ ಮಿಲಿಟರಿ ಪಡೆಗಳು ಶತ್ರುಗಳ ಹೊಡೆದುರುಳಿಸಿತು ಎಂದರು.
ಈ ಕಾರ್ಯಾಚರಣೆಯಿಂದ ಭಾರತ ಸಾಮರ್ಥ್ಯವನ್ನು ಶತ್ರುಗಳಿಗೆ ತೋರಿಸಿಕೊಟ್ಟಿದ್ದೇವೆ. 2025 ಮೇ. 7 ರಂದು ಶತ್ರುಗಳ ದೇಶಕ್ಕೆ ಕಾಲಿಟ್ಟು ಗುಹೆಯಲ್ಲಿ ಅಡಗಿರುವ ಭಯೋತ್ಪಾದಕರನ್ನು ಹೊಡೆದಿರುವ ನಮ್ಮ ಮಿಲಿಟರಿ ಪಡೆ, ಈ ದೇಶದ ರಕ್ಷಣೆ ಬಲವನ್ನು ಮತ್ತಷ್ಟು ಸಾಬೀತು ಪಡಿಸಿದೆ. ಆ ಮೂಲಕ ಪ್ರಧಾನಿ ಉಗ್ರಗಾಮಿ ಚಟುವಟಿಕೆಯನ್ನು ಸೀರೊ ಟಾಲೆರೆನ್ಸ್ ಮಾಡಿದ್ದಾರೆ. ನಮ್ಮ ದೇಶವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಕೂಡ ತಿಳಿಸಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ನಮ್ಮ ದೇಶದ ರಕ್ಷಣೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
