ಶಿವಮೊಗ್ಗ,ಮೇ.7 : ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ವಸುಂಧರ .ಎನ್ . ಅವರಿಗೆ ಪಿ ಎಚ್ ಡಿ ಪದವಿ ಲಭಿಸಿದೆ.
ವಸುಂಧರ ಅವರು ಬರೆದ ”ಮಲೆನಾಡಿನ ಕುಣಬಿ ಸಮುದಾಯದ” ಅಧ್ಯಯನ (ಶಿವಮೊಗ್ಗ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧ ಕ್ಕೆ ಪಿ ಎಚ್ ಡಿ ಪದವಿ ದೊರಕಿದ್ದು, ಇವರಿಗೆ ಸಹ್ಯಾದ್ರಿ ಕಲಾಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹಾಲಮ್ಮ ಮಾರ್ಗದರ್ಶನ ಮಾಡಿದ್ದರು.
ಗಮನಿಸಿ:ಶೃತಿಗೆ ಪಿಹೆಚ್ ಡಿ ಪದವಿ
ಇವರು ಹೊಸನಗರ ತಾಲೂಕು ಬಸವಪುರ ಗ್ರಾಮದ ನಾರಾಯಣಪ್ಪ ಮತ್ತು ಕಮಲಮ್ಮ ಎಂಬ ದಂಪತಿಗಳ ದ್ವಿತೀಯ ಪುತ್ರಿಯಾಗಿದ್ದಾರೆ. ಮತ್ತು ಕುಣಬಿ ಸಮುದಾಯದಲ್ಲಿ ಪಿ ಎಚ್ ಡಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇತ್ತೀಚಿಗೆ ನಡೆದ ಕುವೆಂಪು ವಿ ವಿ ಯ 35 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಇವರಿಗೆ ಪಿ ಎಚ್ ಡಿ ಪದವಿ ಪ್ರದಾನ ಮಾಡಿದರು.
