ಶಿವಮೊಗ್ಗ, ಮೇ.13: ಅಮ್ಮನಿಗೆ ಬಂದ ಜಮೀನಿನನ್ನು ಮಾರಾಟ ಮಾಡಿ ಹೆಂಡತಿ ಮಕ್ಕಳನ್ನು ಸಾಕದೇ ತವರು ಮನೆಗೆ ಕಳಿಸಿ ಮಜಾ ಮಾಡುತ್ತಿದ್ದೀಯ ಎಂದು ನೆಪವೊಡ್ಡಿ ಸಹೋದರನಿಗೆ ಕುಡುಗೋಲಿನಲ್ಲಿ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪಿರ್ಯಾದಿಯ ಮಗ ಸಂತೋಷ ಮತ್ತು ಆತನ ಹೆಂಡತಿ ರಂಜಿತಾರವರ ಮಧ್ಯೆ ಸಂಸಾರದ ವಿಚಾರದಲ್ಲಿ ವೈಮನಸ್ಸು ಬಂದಿದ್ದರಿಂದ ರಂಜಿತಾಳು ತನ್ನ ಮಕ್ಕಳಾದ ರಂಗನಾಥ & ಚಿರು ಇವರೊಂದಿಗೆ ತವರು ಮನೆಯಾದ ಹಾರನಹಳ್ಳಿಗೆ ಹೋಗಿ ಅಲ್ಲಿಯೇ ಇರುತ್ತಾಳೆ.
ಗಮನಿಸಿ:ಪಿಟ್ಸ್ ಕಾಯಿಲೆಯಿಂದ ನೊಂದು ಯುವಕ ಆತ್ಮಹತ್ಯೆ
ಈಗ್ಗೆ ಸುಮಾರು 6-7 ತಿಂಗಳ ಹಿಂದೆ ಪಿರ್ಯಾದಿಯು ಮೂರು ಜನ ಮಕ್ಕಳಿಗೂ ತಲಾ ಮುಕ್ಕಾಲು ಎಕರೆ ಜಮೀನು ಸಮನಾಗಿ ಹಂಚಿದ್ದು ಪಿರ್ಯಾದಿಯ ಮತ್ತೊಬ್ಬ ಮಗನಾದ ರಮೇಶನು ಸಂತೋಷನಿಗೆ ನೀನು ತಾಯಿಗೆ ಬಂದ ಜಮೀನನ್ನು ಮಾರಾಟ ಮಾಡಿ ಬಂದ ಹಣವನ್ನು ನೀನೇ ಇಟ್ಟುಕೊಂಡಿದ್ದೀಯ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಆಗಾಗ್ಗೆ ಬೆದರಿಕೆ ಹಾಕುತ್ತಿದ್ದು ಈ ದಿನ ದಿನಾಂಕ: 13/05/2026 ರಂದು ಬೆಳಗ್ಗೆ ರಮೇಶನು ಸಂತೋಷನಿಗೆ ಅವಾಚ್ಯವಾಗಿ ಬೈದು ಅಮ್ಮನಿಗೆ ಬಂದ ಜಮೀನಿನನ್ನು ಮಾರಾಟ ಮಾಡಿ ಹೆಂಡತಿ ಮಕ್ಕಳನ್ನು ಸಾಕದೇ ತವರು ಮನೆಗೆ ಕಳಿಸಿ ಮಜಾ ಮಾಡುತ್ತಿದ್ದೀಯ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿದವನೇ ಮನೆಯಲ್ಲಿದ್ದ ಒಂದು ಕುಡುಗೋಲು ತಂದು ಸಂತೋಷನ ಬೆನ್ನಿನ ಎಡಭಾಗ, ಎಡತೊಡೆ, ಎಡಭುಜದ ಹತ್ತಿರ ಬಲವಾಗಿ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಬುಲೆರೋ ವಾಹನದಲ್ಲಿ ಚಿಕಿತ್ಸೆಗಾಗಿ ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ 108 ವಾಹನದಲ್ಲಿ ಸಂತೋಷನನ್ನು ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂತೋಷನು ಮಧ್ಯಾಹ್ನ 12.45 ಗಂಟೆಗೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾನೆ. ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 140/2026 ಕಲಂ 103(1) ಬಿ ಎನ್ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ತನಿಖಾಧಿಕಾರಿಯಾದ ಪೊಲೀಸ್ ವೃತ್ತ ನಿರೀಕ್ಷಕರು ನಾಗಮ್ಮ ಹೊಳೆ ಹೊನ್ನೂರು ಪೊಲೀಸ್ ಠಾಣಾ ಪ್ರಭಾರ ರವರ ನೇತೃತ್ವದಲ್ಲಿ, ಪಿಎಸ್ ಐ ಶಾಂತಲಾ ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡವು ದಿನಾಂಕ 13-05-2026 ರಂದು ಸಂಜೆ 05:00 ಗಂಟೆಗೆ ಪ್ರಕರಣದ ಆರೋಪಿತನಾದ ರಮೇಶ ಈತನನ್ನು ದಸ್ತಗಿರಿ ಮಾಡಿರುತ್ತಾರೆ.
