Homeಅಪರಾಧಪಿಟ್ಸ್ ಕಾಯಿಲೆಯಿಂದ ನೊಂದು ಯುವಕ ಆತ್ಮಹತ್ಯೆ

ಪಿಟ್ಸ್ ಕಾಯಿಲೆಯಿಂದ ನೊಂದು ಯುವಕ ಆತ್ಮಹತ್ಯೆ

Spread the love

ಆನಂದಪುರ,ಮೇ.13 :ಪಿಟ್ಸ್ ಕಾಯಿಲೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಹಣ ಖರ್ಚಾಗುತ್ತಿದ್ದರ ಬಗ್ಗೆ ಚಿಂತೆಮಾಡಿ ಯುವಕ ನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮೃತಪಟ್ಟ ದುರ್ದೈವಿ ಧನುಷ್ (25) ತಂದೆ ಲಕ್ಷ್ಮಣ್ ಆನಂದಪುರ ಹೋಬಳಿಯ ಕೋಟೆ ಕೊಪ್ಪ  ನಿವಾಸಿಎಂದು ತಿಳಿದು ಬಂದಿದೆ.

ಗಮನಿಸಿ:ಅಕ್ರಮವಾಗಿ ಮರ ಕಡಿಯಲು ಸಹಕಾರಿ – ಇನ್ನಿಬ್ಬರು ಅಧಿಕಾರಿಗಳು ಅಮಾನತು.

ಧನುಷ್ ಗೆ ಪಿಟ್ಸ್  ಕಾಯಿಲೆ ಇತ್ತು ಇದರ ಚಿಕಿತ್ಸೆಗಾಗಿ ಹೆಚ್ಚಿನ ಹಣ ಖರ್ಚಾಗುತ್ತಿದ್ದದ್ದನ್ನು ಚಿಂತೆ ಮಾಡಿ ಮೇ12 ಮಂಗಳವಾರ ಹೊಲಕ್ಕೆ ಔಷಧಿ ಸಿಂಪಡಿಸಲು ಹೋದ ವೇಳೆ ಧನುಷ್ ವಿಷವನ್ನು ಕುಡಿದು ಅಸ್ವಸ್ಥನಾಗಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಮೊದಲು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗನ್ ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments