Homeಜಿಲ್ಲೆಜನಪರ ಕಾಳಜಿ ಇರುವ ವ್ಯಕ್ತಿಗಳು ಜನರೊಟ್ಟಿಗೆಯೇ ಇರುತ್ತಾರೆ: ಬೇಳೂರು ಗೋಪಾಲಕೃಷ್ಣ

ಜನಪರ ಕಾಳಜಿ ಇರುವ ವ್ಯಕ್ತಿಗಳು ಜನರೊಟ್ಟಿಗೆಯೇ ಇರುತ್ತಾರೆ: ಬೇಳೂರು ಗೋಪಾಲಕೃಷ್ಣ

Spread the love

ಸಾಗರ,ಮೇ.14: ಬಡವರ ಶಿಕ್ಷಣ ಹಾಗೂ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಕಾರ್ಯದಲ್ಲಿಸಿಗಂದೂರು ಕ್ಷೇತ್ರದ ಕಾರ್ಯ ಅಭಿನಂದನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ಸಮೀಪದ ಸಿಗಂದೂರಿನಲ್ಲಿ ಬುಧವಾರ ಸಿಗಂದೂರು ಚೌಡಮ್ಮ ಎಜುಕೇಷನಲ್ ಮತ್ತುಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಧರ್ಮಾಧಿಕಾರಿ ಎಸ್ ರಾಮಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಜನಪರ ಕಾಳಜಿ ಇರುವ ವ್ಯಕ್ತಿಗಳು ಯಾವಾಗಲೂ ಜನರ ಜೊತೆಗೆ ಇರುತ್ತಾರೆ ಎಂಬುದಕ್ಕೆ ಸಿಗಂದೂರುಧರ್ಮಾಧಿಕಾರಿ ಎಸ್ ರಾಮಪ್ಪ ಸ್ವಾರ್ಥ ರಹಿತ ಸಮಾಜ ಸೇವೆ ಕಾರಣ. ರಾಜ್ಯದ ಆಪಾರ ದೇವಸ್ಥಾನ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ, ಶಾಲಾ ಕಾಲೇಜಿಗೆ ಸುಣ್ಣ ಬಣ್ಣ ಕಾರ್ಯಕ್ಕೆ ಉದಾರ ನೆರವುನೀಡಿರುವುದನ್ನು ಅವರು ಶ್ಲಾಘಿಸಿದರು.

ಗಮನಿಸಿ: ಮೇ.17 ರಂದು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಭಾ ಪುರಸ್ಕಾರ-ಸಾಧಕ ಪತ್ರಕರ್ತರಿಗೆ ಸನ್ಮಾನ

ಶರಾವತಿ ತಟದಲ್ಲಿ ಆಧುನಿಕ ಸಂಪರ್ಕ ಇಲ್ಲದ ವೇಳೆಯೇ ಅವಿರತ ಶ್ರಮದಿಂದ ದೇವಾಸ್ಥಾನ ಅಭಿವೃದ್ಧಿಗೆಶ್ರಮಿಸಿರುವುದು ಧಾರ್ಮಿಕ ಕ್ರಾಂತಿಯೇ ಸರಿ ಸಿಗಂದೂರು ಇಂದು ರಾಜ್ಯದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿಒಂದಾಗಿರುವುದು ಹೆಮ್ಮೆ ಎನಿಸುತ್ತದೆ ಎಂದು ಆನಂದಪುರ ಮುರುಫಾಮಠದ ಮಲ್ಲಿಕಾರ್ಜುನ ಮುರುಫಾರಾಜೇಂದ್ರ ಸ್ವಾಮೀಜಿ ಹೇಳಿದರು.

ಜನ್ಮದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಅಸ್ಪತ್ರೆಯಿಂದ ಹೃದಯ ತಪಾಸಣೆ, ರೆಡ್ ಕ್ರಾಸ್ಸಂಸ್ಥೆಯಿಂದ ರಕ್ತದಾನ ಶಿಬಿರ ನೆಡೆಯಿತು.

ವೇಳೆ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ಎಚ್ ಆರ್ ರವಿಕುಮಾರ್ ಪ್ರಮುಖರಾದ ರಾಜನಂದಿನಿ ಕಾಗೋಡು, ಶ್ರೀಧರ್ ಹುಲ್ತಿಕೊಪ್ಪ, ಚಂದ್ರಪ್ಪ ಕಲಸೆ, ಗಣಪತಿ ಮಂಡಗಳಲೆ, ಕೆ ಜಿ ಪ್ರಶಾಂತ್, ಇಂಧೂಧರ ಗೌಡ,ದಿನೇಶ್ ಕುಮಾರ್, ಕಿಶೋರ್ ಬೈರಾಪುರ, ಸತ್ಯನಾರಾಯಣ ಜಿ ಟಿ, ಚಂದ್ರಪ್ಪಅಳೂರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments