Homeಜಿಲ್ಲೆರಸ್ತೆ ದಾಟುವಾಗ ಮಹಿಳೆಗೆ ಕಾರು ಡಿಕ್ಕಿ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ರಸ್ತೆ ದಾಟುವಾಗ ಮಹಿಳೆಗೆ ಕಾರು ಡಿಕ್ಕಿ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

Spread the love

ಆನಂದಪುರ, ಮೇ.14: ಬಸ್‌ ನಿಲ್ದಾಣದ ಎದುರು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಹೊಡೆದ ಘಟನೆ ಮೇ.14 ರ ಗುರುವಾರ ಬೆಳಗ್ಗೆ ನಡೆದಿದೆ.

ರತ್ನಮ್ಮ ಹೊಸಕೊಪ್ಪ ಗಾಯಗೊಂಡ ಮಹಿಳೆ ಎಂದು  ತಿಳಿದು ಬಂದಿದೆ. ಬಸ್‌ ನಿಲ್ದಾಣದ ಎದುರು ರತ್ನಮ್ಮರಾ. ಹೆದ್ದಾರಿಯನ್ನು ದಾಟುತ್ತಿದ್ದ ಸಂದರ್ಭ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ವಾಹನನಿಲ್ಲಿಸದೆ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಮನಿಸಿ: ಜನಪರ ಕಾಳಜಿ ಇರುವ ವ್ಯಕ್ತಿಗಳು ಜನರೊಟ್ಟಿಗೆಯೇ ಇರುತ್ತಾರೆ: ಬೇಳೂರು ಗೋಪಾಲಕೃಷ್ಣ

ಅಲ್ಲಿದ್ದ ಸ್ಥಳೀಯರು ರತ್ನಮ್ಮ ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ತೀವ್ರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

ವಿಷಯಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯವರು ವಾಹನ ಪತ್ತೆ ಹಚ್ಚುವಲ್ಲಿ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments