Homeಅಪರಾಧಕಾರು ಡಿಕ್ಕಿ ಪ್ರಕರಣ- ಆರೋಪಿಯನ್ನು ಒಂದು ಗಂಟೆಯೊಳಗೆ ಪತ್ತೆ ಹಚ್ಚಿದ ಎಸ್ ಐ ಪ್ರವೀಣ್...

ಕಾರು ಡಿಕ್ಕಿ ಪ್ರಕರಣ- ಆರೋಪಿಯನ್ನು ಒಂದು ಗಂಟೆಯೊಳಗೆ ಪತ್ತೆ ಹಚ್ಚಿದ ಎಸ್ ಐ ಪ್ರವೀಣ್ ತಂಡ

Spread the love

ಆನಂದಪುರ,ಮೇ.14: ಬಸ್‌ ನಿಲ್ದಾಣದ ಎದುರು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದ ಘಟನೆ ನಡೆದಿದ್ದು, ಘಟನೆ ನಡೆದ ಒಂದು ಗಂಟೆಯೊಳಗೆ ಕಾರು ಹಾಗೂ ಆರೋಪಿಗಳನ್ನು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಪತ್ತೆ ಹಚ್ಚಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಹೊಸಕೊಪ್ಪದ ರತ್ನಮ್ಮ ಹುಚ್ಚಪ್ಪ (55) ಎಂದು ಗುರುತಿಸಲಾಗಿದೆ.

ಆನಂದಪುರ ಬಸ್‌ ನಿಲ್ದಾಣದ ಎದುರು ರತ್ನಮ್ಮ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು, ಗಂಭೀರ ಗಾಯಗಳ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಗಮನಿಸಿ: ರಸ್ತೆ ದಾಟುವಾಗ ಮಹಿಳೆಗೆ ಕಾರು ಡಿಕ್ಕಿ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಆನಂದಪುರ ಪೊಲೀಸ್ ಸಬ್‌ ಇನ್ಸ್ಪೆಕ್ಟರ್ ಪ್ರವೀಣ್ ನೇತೃತ್ವದ ತಂಡ ಚುರುಕಾಗಿ ಕಾರ್ಯಾಚರಣೆ ನಡೆಸಿ, ಒಂದು ಗಂಟೆಯೊಳಗೆ ಕಾರಿನ ಮೂಲ ಪತ್ತೆ ಹಚ್ಚಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕಾರಿನವರು ಸೊರಬ ಮೂಲದವರು ಎಂದು ತಿಳಿದು ಬಂದಿದೆ.

ಅಪಘಾತಕ್ಕೆ ಒಳಗಾದ ರತ್ನಮ್ಮಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments