Homeಜಿಲ್ಲೆಮೇ.17 ರಂದು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಭಾ ಪುರಸ್ಕಾರ-ಸಾಧಕ ಪತ್ರಕರ್ತರಿಗೆ ಸನ್ಮಾನ

ಮೇ.17 ರಂದು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಭಾ ಪುರಸ್ಕಾರ-ಸಾಧಕ ಪತ್ರಕರ್ತರಿಗೆ ಸನ್ಮಾನ

Spread the love

ಶಿವಮೊಗ್ಗ, ಮೇ.14: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಮೇ 17 ರಂದು ವಾರ್ಷಿಕ ಕ್ರೀಡಾಕೂಟ, ಪ್ರತಿಭಾಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಯು.ವೈದ್ಯನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 9 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಸಂಘದ ರಾಜ್ಯಸಮಿತಿ ನಿರ್ದೇಶಕರಾದ ಕೆ.ವಿ.ಶಿವಕುಮಾರ್, ಎನ್.ರವಿಕುಮಾರ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 3 ಗಂಟೆಗೆ ಪತ್ರಿಕಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಏರ್ಪಡಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಾದ ಸಿದ್ದಾರ್ಥ ಎ.ಕಶ್ಯಪ, ಧೃವ ಎಸ್. ಹೆಗಡೆ, ದಿಶಾಂತ್ ಕೆ.ಆರ್., ಎನ್.ಸಾನ್ವಿ, ಭಾವನ ಎಸ್., ಎಚ್.ವೈ. ಚೇತನಾ, ತನ್ನಿಷ್ಕಾ, ಎ.ಸಂಜನ, ಎನ್.ವರ್ಷಿಣಿ, ಯದುವೀರ್ ಸಿಂಗ್, ನೂರೈನ್ ಫಾತಿಮಾ, ಆದಿತ್ಯ ಎಸ್., ಎಂ.ಎಸ್. ಸಾತ್ವಿಕ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಹಾಗೆಯೇ ರಾಷ್ಟ್ರೀಯ ರಕ್ಷಾ ವಿವಿ ಚಿನ್ನದ ಪದಕ ವಿಜೇತೆ, ಪ್ರೇರಣಾ ಕೆ.ರಾವ್ ಹಾಗೂ ಬಿಎಎಂಎಸ್‌ನಲ್ಲಿ 4ನೇ ರ‍್ಯಾಂಕ್ ಪಡೆದ ಕೆ.ಎಸ್.ಲಲಿತೇಶ್ವರಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು ಎಂದರು.

ಗಮನಿಸಿ: ಪ್ರಶ್ನೆ ಪತ್ರಿಕೆ ಸೋರಿಕೆ-ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು: ಆರ್.ಪ್ರಸನ್ನಕುಮಾರ್

ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಹಾಗೂ ರಾಜ್ಯ ಸಮಿತಿ ನಿರ್ದೇಶಕರಾದ ಕೆ.ವಿ.ಶಿವಕುಮಾರ್, ಎನ್.ರವಿಕುಮಾರ್ ಇವರಿಗೆ ಗೌರವ ಸಮರ್ಪಿಸಲಾಗುವುದು. ಹಾಗೆಯೇ ಸಾಧಕ ಪತ್ರಕರ್ತರಾದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಆರ್.ಪಿ.ಭರತ್‌ರಾಜ್ ಸಿಂಗ್, ಡಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ ಪುರಸ್ಕೃತರಾದ ಶರತ್‌ಕುಮಾರ್, ಅಭಿಮಾನಿ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾದ ಮಹೇಶ್ ಹೆಗಡೆ, ಗಣೇಸ್ ಜಿ.ದತ್ತಿ ಪ್ರಶಸ್ತಿ ಪುರಸ್ಕೃತರಾದ ಅರುಣ್ ಮಾಸಡಿ ಇವರನ್ನು ಗೌರವಿಸಲಾಗುವುದು ಎಂದರು.

ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಜಿಪಂ ಸಿಇಓ ಎನ್.ಹೇಮಂತ್, ರಾಜ್ಯ ಸಂಘದ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ವಾರ್ತಾ ಇಲಾಖೆ ಸಹಾಯಕ ಅಧಿಕಾರಿ ಭಾಗ್ಯ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ನ ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ರಾಜ್ಯ ಸಂಘದ ನಿರ್ದೇಶಕರಾದ ಕೆ.ವಿಶಿವಕುಮಾರ್, ಎನ್.ರವಿಕುಮಾರ್ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಹೆಚ್.ಯು.ವೈದ್ಯನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ, ಉಪಾಧ್ಯಕ್ಷರಾದ ಕೆ.ಎಸ್.ಹುಚ್ರಾಯಪ್ಪ, ಟಿ.ಸತ್ಯನಾರಾಯಣ, ದೇಶಾದ್ರಿ ಹೊಸ್ಮನೆ, ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಖಜಾಂಚಿ ಎಸ್.ಆರ್.ರೋಹಿತ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಿ.ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments