ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.26:
ಹೈಕಮಾಂಡ್ ಬಳಿ ಹೋದರೆ ಸಿದ್ದರಾಮಯ್ಯನವರ ಸಿಎಂ ಸ್ಥಾನ ಉಳಿಯಬಹುದು. ಆದರೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ತಪ್ಪಿಸಿದರೆ ಮಾತ್ರ ಅವರ ಸಿಎಂ ಸ್ಥಾನ ಉಳಿಯುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.
ಮಂಗಳವಾರ ವಕೀಲದ ಭವನದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಹಕ್ಕೊತ್ತಾಯಕ್ಕೆ ನಡೆಯುತ್ತಿರುವ ವಕೀಲದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಮನಿಸಿ: ಇದು ನಮ್ಮ ರಾಜಕೀಯವಲ್ಲ, ಮಲೆನಾಡಿನ ಜನರ ನ್ಯಾಯಸಮ್ಮತ ಹಕ್ಕು! : ಬಿ ವೈ ಆರ್
ಜೂ.1 ರಂದು ವಿವಿಧ ಯೋಜನೆಗಳ ಶಂಕುಸ್ಥಾಪನೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಆ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡುವುದಾಗಿ ಘೋಷಿಸಬೇಕು. ಇಲ್ಲಿದ್ದರೆ ಜಿಲ್ಲಾ ವಕೀಲರ ಸಂಘದ ಜೊತೆಗೆ ನಮ್ಮ ರಾಷ್ಟ್ರ ಭಕ್ತರ ಬಳಗ ಎಲ್ಲಾ ಹೋರಾಟಕ್ಕೂ ಸಿದ್ದವಾಗುತ್ತದೆ ಎಂದರು.
ಈ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಾನೂನು ಸಚಿವರು, ಗೃಹ ಸಚಿವರು ಪ್ರಜ್ಞಾವಂತರೆದಂದು ಕೊಂಡಿದ್ದೇವೆ. ಅದನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಶಿವಮೊಗ್ಗಕೆ ಹೈ ಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಅವಕಾಶ ಕೊಡಬೇಕು ಎಂದರು.
