Homeರಾಜಕೀಯರಾಜೀನಾಮೆಗೆ ತಿಂಗಳು ಅವಕಾಶಕ್ಕೆ ಒಲ್ಲೆ ಎಂದರಾ ರಾಹುಲ್? ಗೌರವದ ನಿರ್ಗಮನಕ್ಕೆ ಸಿದ್ದರಾಮಯ್ಯ ಅಣಿಯಾಗಲೇಬೇಕಾಯಿತಾ?

ರಾಜೀನಾಮೆಗೆ ತಿಂಗಳು ಅವಕಾಶಕ್ಕೆ ಒಲ್ಲೆ ಎಂದರಾ ರಾಹುಲ್? ಗೌರವದ ನಿರ್ಗಮನಕ್ಕೆ ಸಿದ್ದರಾಮಯ್ಯ ಅಣಿಯಾಗಲೇಬೇಕಾಯಿತಾ?

Spread the love

ಶಿವಮೊಗ್ಗ ಟೆಲೆಕ್ಸ್, ಮೇ 27

“ಇದಾ ನಿಮಿತ್ತಂ” ಎನ್ನುವ ಮಾತು ರಾಜಕಾರಣಕ್ಕೆ ಹೆಚ್ಚು ಅನ್ವಯವಾಗುವುದಿಲ್ಲ. ಕ್ಷಣ ಮಾತ್ರದಲ್ಲಿ ಅನೀರಿಕ್ಷಿತ ಬೆಳವಣಿಗೆಗಳು ಘಟಿಸಿಬಿಡುತ್ತವೆ. ರಾಜಕೀಯ ತಜ್ಞರ ಊಹೆಗೂ ನಿಲುಕುವುದಿಲ್ಲ. ಕರ್ನಾಟಕ ರಾಜಕಾರಣ ಮಗ್ಗಲು ಬದಲಿಸುತ್ತಿದೆ. ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಮುಖ್ಯಮಂತ್ರಿ ಸ್ಥಾನದ ಹಕ್ಕುದಾರಿಕೆ ಪ್ರತಿಪಾದನೆ ಆಗುತ್ತಲೆ ಬಂದಿತ್ತು.

ಸರ್ಕಾರಕ್ಕೆ ಎರಡೂವರೆ ವರ್ಷಗಳು ತುಂಬುತ್ತಿದ್ದಂತೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬ ಒತ್ತಾಯಗಳು ಪಕ್ಷದ ಒಳಗೆ ಕೇಳಿ ಬರತೊಡಗಿತ್ತು. ಎರಡು ಅಧಿಕಾರ ಕೇಂದ್ರಗಳಾಗಿ ನಡೆಯುತ್ತಿದ್ದ ಈ ಗೊಂದಲಕ್ಕೆ ಕೊನೆಗೂ ಹೈಕಮಾಂಡ್ ಪರಿಹಾರ ಕಂಡುಕೊಂಡಿದೆ.

ಆರಂಭದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಹೈಕಮಾಂಡ್ (ರಾಹುಲ್ ಗಾಂಧಿ ) ಹೇಳಿದಂತೆ ಕೇಳುತ್ತೇನೆ ಎನ್ನುವ ಮೂಲಕ ತಮ್ಮ ರಾಜಕೀಯ ನಿರ್ಧಾರವನ್ನು ರಾಹುಲ್ ಗಾಂಧಿ ಅವರ ಹೆಗಲಿಗೆ ಹಾಕಿದ್ದರು. ಈಗ ಇದೇ ರಾಹುಲ್‌ಗಾಂಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದು , ಸ್ವತಃ ಸಿದ್ದರಾಮಯ್ಯ ಅವರಿಗೆ ಅನಿರೀಕ್ಷಿತ ಆಘಾತ ಎನ್ನುವಂತಾಗಿದೆ.

ಗಮನಿಸಿ: ಸೈದ್ದಾಂತಿಕ ರಾಜಕಾರಣಕ್ಕೆ ಕೊನೆಯ ಮೊಳೆ

ದೆಹಲಿಯಲ್ಲಿ ನಡೆದ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರ ಜೊತೆ ರಾಹುಲ್‌ಗಾಂಧಿ ಒನ್ ಟು ಒನ್ ಮಾತನಾಡಿ ರಾಜೀನಾಮೆ ಸೂಚಿಸಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಅವರೊಂದಿಗೆ ರಾಹುಲ್‌ಗಾಂಧಿ ಒನ್ ಟು ಒನ್ ಮಾತುಕತೆ ಆಡದೆ ಉಳಿದಿದ್ದು ಮೊದಲೆ ಎಲ್ಲವೂ ತರ‍್ಮಾನವಾಗಿತ್ತು. ಅಧಿಕಾರ ಹಂಚಿಕೆಯ ಒಪ್ಪಂದ ಆಗಿತ್ತು , ಅದರಂತೆ ನಡೆದುಕೊಳ್ಳಬೇಕಾದವರ ಜೊತೆ (ಸಿದ್ದರಾಮಯ್ಯ) ಮಾತ್ರವೆ ಮಾತುಕತೆ ನಡೆಸಲಾಯಿತು ಅನ್ನೋದು ಇದರ ತಾತ್ಪರ್ಯ.

ಸಿದ್ದರಾಮಯ್ಯ ಅವರ ಜೊತೆಗೆ ದೆಹಲಿಗೆ ತೆರಳಿದ್ದ ಅವರ ಆಪ್ತ ಸಚಿವರು, ಶಾಸಕರುಗಳು ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಸುಳಿವು ಗ್ರಹಿಸಿದ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಾಸಕರಲ್ಲಿ ಬಹುತೇಕರು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ರಾಜಕೀಯ ನಿಷ್ಠೆಯ ಪಲ್ಲಟಕ್ಕೆ ಸಾಕ್ಷಿಯಾಗಿತ್ತು.

ಸಿದ್ದರಾಮಯ್ಯ ಅವರು ನಾಳೆ(ಮೇ.28) ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತವಾಗಿದೆ. ಅದಕ್ಕಾಗಿ ರಾಜಭವನದ ಅನುಮತಿಯನ್ನು ಪಡೆಯಲಾಗಿದೆ. ನಂತರದಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ಕೆಯಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆಗಳು ನಡೆಯಲಿವೆ.

ದೆಹಲಿಯಲ್ಲಿ ಕಾಂಗ್ರೇಸ್ ಅಗ್ರನಾಯಕ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಅವರ ನಡುವೆ ನಡೆದ ಒನ್ ಟು ಒನ್ ಮಾತುಕತೆ ಸಂದರ್ಭದಲ್ಲಿ ರಾಜ್ಯದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಜಾತಿಜನಗಣತಿ ವರದಿ ಜಾರಿಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಒಂದು ತಿಂಗಳ ಕಾಲ ಅವಕಾಶ ನೀಡಬೇಕೆಂಬ ಸಿದ್ದರಾಮಯ್ಯ ಅವರ ಮನವಿಯನ್ನು ರಾಹುಲ್‌ಗಾಂಧಿ ಕಡ್ಡಿ ತುಂಡು ಮಾಡಿದಂತೆ ನಿರಾಕರಿಸಿದ್ದು, ಆದಷ್ಟು ಬೇಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾತಿನಂತೆ ನಡೆದುಕೊಳ್ಳಿ ಎಂದು ಸೂಚಿಸಿದ್ದಾರೆ. ಇದಕ್ಕೂ ಮುಂಚೆ ಸೋನಿಯಾಗಾಂಧಿ. ಪ್ರಿಯಾಂಕ ಗಾಂಧಿ , ರಾಹುಲ್ ಗಾಂಧಿ ಅವರ ನಡುವೆ ನಡೆದ ಮಾತುಕತೆಯಲ್ಲಿ ಡಿ.ಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ, ಶ್ರಮ ಎಲ್ಲವನ್ನೂ ವಿಮರ್ಶಿಸಿಸೆಯೇ ಅಂತಿಮವಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವ ನಿರ್ಧಾರಕ್ಕೆ ಬರಲಾಯತು.

ಡಿ ಕೆ ಶಿವಕುಮಾರ್ ಅಂದುಕೊಂಡಂತೆ ಎಲ್ಲವೂ ಆಗಿದೆ. ಸಿದ್ದರಾಮಯ್ಯ ಅವರಿಗೆ ಗೌರವಯುತವಾದ ಬೀಳ್ಕೊಡಿಗೆ ಬೇಕಂತೆ , ಅದರಂತೆ ಅವರನ್ನು ಗೌರವಯುತವಾಗಿ ಬೀಳ್ಕೊಡಿಗೆ ನೀಡಲಾಗುವುದು ಎಂದು ಡಿ. ಕೆ ಶಿವಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ನಾಳೆಯೊಳಗೆ ಎಲ್ಲವೂ ಅಂದುಕೊಂಡಂತೆ ಆದರೆ ಸಿದ್ದರಾಮಯ್ಯ ಎಂಬ ಜನಪ್ರಿಯ ಜನನಾಯಕನನ್ನು ಗೌರವಯುತವಾಗಿ ಬೀಳ್ಕೋಡುವ ಸಂದರ್ಭವನ್ನು ರಾಜ್ಯ ನೋಡಬಹುದಾಗಿದೆ.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದರಿಂದ ರಾಜ್ಯದಲ್ಲಿ ಅಧಿಕೃತ ವಿಪಕ್ಷ ನಾಯಕರಾಗುವುದು ಜೆಡಿಎಸ್ ನ ಅಧಿನಾಯಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿವೆ. !!!!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments