Homeಜಿಲ್ಲೆರಾತ್ರಿ ಇಡೀ ಸುರಿದ ಮಳೆಗೆ ಶಾರ್ಟ್ ಸರ್ಕ್ಯೂಟ್

ರಾತ್ರಿ ಇಡೀ ಸುರಿದ ಮಳೆಗೆ ಶಾರ್ಟ್ ಸರ್ಕ್ಯೂಟ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.30

ರಾತ್ರಿ ಇಡೀ ಸುರಿದ ಮಳೆಗೆ ನಗರದ ಬಿ.ಹೆಚ್.ರಸ್ತೆಯಲ್ಲಿ ಚರ್ಚ್ ಮುಂಭಾಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ.

ಇಂದು ಬೆಳಗಿನ ಜಾವ ಸಿಬ್ಬಂದಿಗಳು 9.30ರ ಸುಮಾರಿಗೆ ಆಗಮಿಸಿ ಬಾಗಿಲು ತೆಗೆದಾಗ ಬ್ಯಾಂಕಿನ ಒಳಭಾಗದಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಇದರಿಂದ ಬೆಂಕಿಯ ಅವಘಡ ಆಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಧಾವಿಸಿ ಅನಾಹುತವನ್ನು ತಪ್ಪಿಸಿದೆ.

ಗಮನಿಸಿ: ಅಂತ್ಯ ಸಂಸ್ಕಾರ ಯೋಜನೆ ಮರು ಜಾರಿ ಮಾಡಿ; ಕಲ್ಲೂರು ಮೇಘರಾಜ್

ಈ ಘಟನೆಯಿಂದ ಬ್ಯಾಂಕಿನ ಮುಂಭಾಗದ ಹಾಲ್‌ನಲ್ಲಿ ಇರುವ ಕಂಪ್ಯೂಟರ್‌ಗಳು ಮತ್ತು ಮರದ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು, ಬ್ಯಾಂಕಿನ ಲಾಕರ್ ಮತ್ತು ಭದ್ರತಾ ಕೊಠಡಿಗೆ ಯಾವುದೇ ಹಾನಿಯಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments