ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.24
ಜುಲೈ 28 ವಿಶ್ವ ಹೆಪಟೈಸಿಸ್ ದಿನವಾಗಿದ್ದು, ಇದರ ಅಂಗವಾಗಿ ಸವಳಂಗ ರಸ್ತೆಯಲ್ಲಿ ಸುಶೋಧ ಆಸ್ಪತ್ರೆಯಲ್ಲಿ ಜು. 26 ರಿಂದ ಆ.1ರ ವರೆಗೆ ಹೆಪಟೈಸಿಸ್ ಬಿ ಮತ್ತು ಸಿ ತಪಾಸಣೆ ಹಾಗೂ ಹೆಪಟೈಟಿಸ್ ಬಿ(ಹೆಚ್‌ಇಪಿ-ಬಿ) ಉಚಿತ ಲಸಿಕೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರದೀಪ್‌ಕುಮಾರ್ ಜೆ.ಕೆ. ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಪಟೈಸಿಸ್ `ಬಿ’ ಮತ್ತು `ಸಿ’ ಸೋಂಕು ವೀವರ್ ಸಿರೋಸಿಸ್ ಹಾಗೂ ಲೀವರ್ ಕ್ಯಾನ್ಸರ್‌ಗೆ ಬಹುಮುಖ್ಯ ಕಾರಣವಾಗಿದೆ. ಈ ಸೋಂಕನ್ನು ಸ್ಯಾಂಪಲ್ ರಕ್ತ ಪರೀಕ್ಷೆ ಮೂಲಕ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು ಹಾಗು ಯಾರಿಗೂ ಹರಡದಂತೆ ತಡೆಗಟ್ಟಬಹುದು ಎಂದರು.
ಗಮನಿಸಿ: ಸರ್ವಾಧಿಕಾರವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಟೆಲೆಕ್ಸ್ ರವಿಕುಮಾರ್ ಸಲಹೆ
ಜು.26ರಿಂದ ಆ.1ರ ವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಹೆಪಟೈಸಿಸ್ `ಬಿ’ ಲಸಿಕೆಯ ಮೂರು ಡೋಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮವನ್ನು ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಖ್ಯಾತ ನಟ ದಿಗಂತ್ ಮಂಚಾಲೆ ಭಾಗವಹಿಸಲಿದ್ದಾರೆ ಎಂದರು.
ಹೆಪಟೈಸಿಸ್ `ಬಿ’ ಮತ್ತು `ಸಿ’ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜು.26ರ ಬೆಳಿಗ್ಗೆ 7.30ಕ್ಕೆ ಫ್ರೀಡಂ ಪಾರ್ಕ್ನಿಂದ ನಮ್ಮ ಆಸ್ಪತ್ರೆಯವರೆಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹೆಚ್ಚಿನ ವಿವರಗಳಿಗಾಗಿ ಮೊ. 8277736465, 7349091991ರಲ್ಲಿ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಡಾ.ಅರ್ಜುನ್ ರಾವ್, ಕೃಷ್ಣಮೂರ್ತಿ, ಬಸವರಾಜ್, ಯಶವಂತ್ ಇನ್ನಿತರರು ಇದ್ದರು.
