Homeಜಿಲ್ಲೆಸರ್ವಾಧಿಕಾರವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಟೆಲೆಕ್ಸ್ ರವಿಕುಮಾರ್ ಸಲಹೆ

ಸರ್ವಾಧಿಕಾರವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಟೆಲೆಕ್ಸ್ ರವಿಕುಮಾರ್ ಸಲಹೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.24

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರವನ್ನು ಪ್ರಶ್ನಿಸುವ ಹಾಗೂ ಆ ನಡೆಯನ್ನು ವಿಮರ್ಶೆ ಮಾಡುವುದು ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಅಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಲೇಖಕ ಟೆಲೆಕ್ಸ್ ರವಿಕುಮಾರ್ ಕಿವಿಮಾತು ಹೇಳಿದರು.

ಅವರು ಶುಕ್ರವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪರಿಣಿತ ಪ್ರಾಧ್ಯಾಪಕರು-ಉಪನ್ಯಾಸ ಸರಣಿಯ (ಶೈಕ್ಷಣಿಕ ಕ್ರಾಂತಿಯ ಹೊಸ ಮನ್ವಂತರ ಪಾಠಶಾಲೆ) ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಪತ್ರಿಕೋದ್ಯಮ ಇಂದು ಬದಲಾಗುತ್ತಿದೆ. ಮಾಧ್ಯಮ, ಉದ್ಯಮ, ಧರ್ಮ ಇವುಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ ನಿವೆಲ್ಲಾ ಇದರಿಂದ ಆಚೆ ಬರಬೇಕು. ಸ್ವತಂತ್ರವಾಗಿ ಯೋಚಿಸುವ ಗುಣವನ್ನು ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇವತ್ತು ಮೊಬೈಲ್ ಹಿಡಿದವರು ಕೂಡ ಪತ್ರಕರ್ತರಾಗಿ ರೂಪಿತಗೊಳ್ಳುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞಾನವೂ ಹೊರ ಬರುತ್ತಿದೆ. ಹಾಗಾಗಿ ನಿವೆಲ್ಲಾ ಪತ್ರಿಕೋದ್ಯಮದ ಸವಾಲುಗಳ ನಡುವೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ವತಂತ್ರ ಪತ್ರಕರ್ತನಾಗಿ ಬೆಳೆಯುವ ವಿಪುಲ ಅವಕಾಶವಿದೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಾಗಿ ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿವ್ಯಕ್ತಿ ಸ್ವಾತಂತ್ರ ಪ್ರಜಾಪ್ರಭುತ್ವದ ಆಶಯವಾಗಿದ್ದು, ಪ್ರಶ್ನೆ ಮಾಡುವುದು ಸಹಜವಾಗಿದೆ. ಅದಕ್ಕೆ ಉತ್ತರ ಹೇಳುವ ಕೆಲಸ ಸರ್ಕಾರದ್ದು ಆದರೆ ಅದು ನಡೆಯುತ್ತಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ದಾರಿತಪ್ಪಿದಾಗ ಪತ್ರಿಕಾರಂಗ ಅವುಗಳನ್ನು ಎಚ್ಚರಿಸಬೇಕು. ಆದರೆ ಎಚ್ಚರಿಸಬೇಕಾದವರೆ ಸೋತರೆ ಪ್ರಜಾಪ್ರಭುತ್ವವೇ ಕುಸಿದು ಬೀಳುತ್ತದೆ. ಹಾಗಾಗಿ ಪತ್ರಿಕೋದ್ಯಮಕ್ಕೆ ಬರುವವರು ಎಚ್ಚರಿಕೆಯಿಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹಾದೇವ ಸ್ವಾಮಿ, ಉಪನ್ಯಾಸಕಿ ವರ್ಣ, ಪತ್ರಕರ್ತ ದೇಶಾದ್ರಿ ಹೊಸ್ಮನೆ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments