Homeಜಿಲ್ಲೆಕಾಂಗ್ರೆಸ್ ಯುವ ಜನತೆ ಪ್ರತಿಭಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ: ಸಂಸದ

ಕಾಂಗ್ರೆಸ್ ಯುವ ಜನತೆ ಪ್ರತಿಭಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ: ಸಂಸದ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.25

ಯುವ ಜನತೆಯ ಪ್ರತಿಭಟನೆಯನ್ನು ಕಾಂಗ್ರೆಸ್ ರಾಜಕಾರಣಕಷ್ಟೆ ಬಳಸಿಕೊಳ್ಳುತ್ತಿದೆ ಹೊರತು ಅವರ ಭವಿಷ್ಯವನ್ನು ಕಟ್ಟಲು ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಅವರು ಶನಿವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಕಳೆದ ಒಂದು ವಾರದಿಂದ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈಗಾಗಲೇ ನೀಟ್ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಪಟ್ಟಂತೆ ಮೋದಿ ಸರ್ಕಾರ ಸ್ಪಷ್ಟವಾದ ತೀರ್ಮಾನವನ್ನು ಕೈಗೊಂಡಿದೆ. ಮರು ಪರೀಕ್ಷೆ ಮಾಡಿದ್ದಾರೆ. ಅಕ್ರಮಕ್ಕೆ ಕಠಿಣವಾದ ಕಾನೂನು ಜಾರಿ ಮಾಡಿದ್ದು, 5 ಕೋಟಿ ದಂಡ 10 ವರ್ಷ ಜೈಲು ಶಿಕ್ಷ ನೀಡುವುದಾಗಿ ಘೋಷಿಸಿದ್ದಾರೆ ಎಂದರು.

ಯುವಕರ ಪ್ರತಿಭಟನೆ ರಾಜಕೀಯ ಪ್ರೇರಿತದಿಂದ ಕೂಡಿದೆ. ಯುವಕರ ಮಧ್ಯೆ ದೇಶ ವಿರೋಧಿಗಳು ತುಂಬಿಕೊಂಡು ಮೋದಿ ಅವರ ಹೆಸರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ನರೇಂದ್ರ ಮೋದಿಗೆ ಇಂತಹ ಘಟನೆಗಳು ಹೊಸದಲ್ಲಾ ಗೋಧ್ರದಿಂದ ಇಲ್ಲಿಯವರೆಗೂ ಇದನ್ನೆಲ್ಲಾ ಎದುರಿಸಿಕೊಂಡು ಬಂದಿದ್ದಾರೆ. ಯಾರು ಇವರಿಗೆ ಬೆಂಬಲ ಕೊಟ್ಟಿಲ್ಲ. ಮೋದಿ ನಿರೀಕ್ಷೆಯೂ ಮಾಡಿಲ್ಲ. ಮೋದಿ ಸರ್ಕಾರದ ವಿರುದ್ದ ದೇಶವನ್ನು ಎತ್ತು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆಟ್ಟ ಚಿತ್ರಣ ಬಿಂಬಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾದಲ್ಲಿ ಇದ್ದಾಗ ಏನೇನು ನಡೆದಿದೆಯೆಂದು ಈ ದೇಶದ ಜನರು ನೋಡಿದ್ದಾರೆ. ನೀಟ್ ಪರೀಕ್ಷೆ ಸಂಬಂಧಿಸಿದಂತೆ ಅಧೀವೆಶದಲ್ಲಿ ಚರ್ಚೆ ನಡೆಯಲಿದೆ. ಆ ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments