Homeಜಿಲ್ಲೆನಮಗೆ ರಕ್ಷಣೆ ಇಲ್ಲ, ಇನ್ನೂ ಪ್ರಜೆಗಳ ಗತಿಯೇನು: ಶಾಸಕ ಕಿಡಿ

ನಮಗೆ ರಕ್ಷಣೆ ಇಲ್ಲ, ಇನ್ನೂ ಪ್ರಜೆಗಳ ಗತಿಯೇನು: ಶಾಸಕ ಕಿಡಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.24

ಬಿಜೆಪಿ ಶಾಸಕರಿಗೆ ರಕ್ಷಣೆ ಕೊಡಲು ಆಗದ ಸರ್ಕಾರಕ್ಕೆ ಇನ್ನೂ ರಾಜ್ಯದ ಪ್ರಜೆಗಳಿಗೆ ಹೇಗೆ ರಕ್ಷಣೆ ನೀಡುತ್ತದೆೆ. ಅವರ ಗತಿಯೇನು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದು.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುರುವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಆಗಿ ಜಿಲ್ಲಾ ಬಿಜೆಪಿ ಕಚೇರಿ ಧ್ವಂಸ ಮಾಡಲು ನುಗ್ಗಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ ಎಂದರು.

ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವಕ್ಕಿಂತ ಹಿಂಸಾಚಾರ ಹಾಗೂ ಸಂಘ಼ರ್ಷವೇ ಮುಖ್ಯವಾಗಿದೆ. ಗುರುವಾರ ನಡೆದ ಘಟನೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲೂ ಕೂಡ ಬಿಜೆಪಿ ಶಾಸಕರ ಬಸ್ಸಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದೆ ನೋಡುತ್ತಾ ಕೂತಿತ್ತು. ರಾಜ್ಯದಲ್ಲಿ ಇಷ್ಟೆಲ್ಲಾ ಗಲಭೆಯಾಗುತ್ತಿದ್ದರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತ್ರ ಏನು ತಿಳಿಯದಂತೆ ಇದ್ದರೆ. ನನಗ್ಯಾಕೋ ಗೃಹ ಸಚಿವರೇ ಇವೆಲ್ಲಾ ಹೇಳಿ ಮಾಡಿಸಿದಂತೆ ಭಾಸವಾಗುತ್ತಿದೆ ಎಂದು ಕುಟುಕಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ದತ್ತಿನಿಧಿ ಪ್ರಶಸ್ತಿಗಳಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರಾದ ಜಿ.ವಾದಿರಾಜ್, ಶ್ರೀಕಾಂತ್ ಭಟ್ ಮತ್ತು ಕಣ್ಣಪ್ಪ ಅವರನ್ನು ಜಿಲ್ಲಾ ಬಿಜೆಪಿ ಅಭಿನಂದಿಸುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments