ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.27
ಬಗರ್‌ಹುಕ್ಕುಂ ಜಮೀನಿನ ಸಾಗುವಳಿಗೆ ಸಂಬಂಧಿಸಿದಂತೆ ರುಕ್ಮಿಣಮ್ಮ ಎಂಬ ದಲಿತ ಮಹಿಳೆಗೆ ನ್ಯಾಯ ಕೊಡದೆ ದೌರ್ಜನ್ಯ ಎಸಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಶಿಕಾರಿಪುರದ ಸುನೀಲ್ ಬನ್ನೂರು ಆಗ್ರಹಿಸಿದರು.
ಅವರು ಸೋಮವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ವರ್ಗಕ್ಕೆ ಸೇರಿದ ರುಕ್ಮಿಣಮ್ಮ ಅವರ ತಂದೆಯ ಹೆಸರಿಗೆ ಬಂದಿದ್ದ ಶಿಕಾರಿಪುರ ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಸರ್ವೇ 45ರಲ್ಲಿ 2 ಎಕರೆ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದರು. 1998ರಲ್ಲಿ ಅರ್ಜಿ ನಮೂನೆ 53ರ ಪ್ರಕಾರವೇ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ ಸ್ವಾಧಿನದಲ್ಲಿದ್ದರು. ಇದು ಅವರಿಗೆ ಅವರ ತಂದೆಯಿಂದ ಬಂದಿದ್ದು, ನಂತರ 2003ರಲ್ಲಿ ಅವರ ತಂದೆ ಮರಣ ಹೊಂದಿದ್ದಾಗ. ರುಕ್ಮಿಣಮ್ಮ ಅವರ ಗಂಡ ಮತ್ತು ಮಕ್ಕಳು ಗುಡಿಸಲು ಹಾಕಿಕೊಂಡು ವಾಸವಿದ್ದರು ಎಂದರು.
ಗಮನಿಸಿ: ಸಿದ್ದರಾಮಯ್ಯನವರ ಮಾತು ನಂಬಲು ಅರ್ಹವಲ್ಲ:ಕೆ.ಎಸ್.ಈಶ್ವರಪ್ಪ
ಆದರೆ ಎಲ್ಲಮ್ಮ ಕೋಂ ಶಶಿಕುಮಾರ್ ಎಂಬವವರು ಇದು ನಮ್ಮ ಜಮೀನು ನಮಗೆ ಬಿಟ್ಟು ಕೊಡಬೇಕು ಎಂದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ರುಕ್ಮಿಣಮ್ಮ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ್ಯಾಯ ಒದಗಿಸಬೇಕಾಗದ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಅವರು ಧಮಕಿ ಹಾಕಿ ಜಮೀನು ಬಿಟ್ಟು ಕೊಡುವಂತೆ ದರ್ಪ ನಡೆಸಿದ್ದಾರೆ ಎಂದು ದೂರಿದರು.
ಜಮೀನಿಗೆ ಸಂಬಂಧಿಸಿದಂತೆ ರುಕ್ಮಿಣಮ್ಮನ ಪರವಾಗಿ ಎಲ್ಲಾ ದಾಖಲೆಗಳು ಇದ್ದರು ಕೂಡ ಪೊಲೀಸರು ಬಂದು ಗುಡಿಸಲುಗಳನ್ನ ಕಿತ್ತು ಹಾಕಿ ಪಾತ್ರೆ ಸಾಮಾಗ್ರಿಗಳನ್ನು ಹೊರಗೆ ಬಿಸಾಕಿದರು. ಇದನ್ನು ವಿಡಿಯೋ ಮಾಡುತ್ತಿರುವುದನ್ನು ಕಂಡು ಮೊಬೈಲನ್ನು ಕಸಿದು ಕೊಂಡು ವಿಡಿಯೋಗಳನ್ನು ಡಿಲಿಟ್ ಮಾಡಿ ಮೊಬೈಲ್‌ಗಳನ್ನು ಅವರೆ ಇಟ್ಟುಕೊಂಡು ಸಾಕ್ಷಿ ನಾಶಮಾಡಲು ಮುಂದಾಗಿದ್ದಾರೆ. ಇಂತಹ ಪೊಲೀಸ್ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಗುಡಿಸಲನ್ನು ಕಿತ್ತು ಹಾಕಿರುವುದನ್ನು ಒಂದು ಮೊಬೈಲ್ ಮಾಡಿದ ವಿಡಿಯೋ ಸಾಕ್ಷಿಯಾಗಿ ನಮ್ಮ ಬಳಿ ಇದೆ ಎಂದು ವಿಡಿಯೋ ಪ್ರದರ್ಶನ ಮಾಡಿ ತೋರಿಸಿದರು.
ಸಂತ್ರಸ್ತೆ ರುಕ್ಮಿಣಮ್ಮ ಮಾತನಾಡಿ, ಹಲವು ವರ್ಷಗಳಿಂದ ಜಮೀನಿನ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಈಗಲು ನಮ್ಮ ಸ್ವಾಧೀನಲ್ಲಿ ಜಮೀನು ಇದೆ. ಆದೆ ಊರಿನ ಕೆಲವು ಉಳ್ಳವರು ಸೇರಿಕೊಂಡು ದಲಿತರಾದ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನ್ಯಾಯ ನೀಡಬೇಕಾದ ಪೊಲೀಸರು ಕೂಡ ಉಳ್ಳವರ ಜೊತೆ ಸೇರಿರುವುದು ನನಗೆ ಆತಂಕ ತಂದಿದೆ. ನಮ್ಮ ಮೇಲೆಯೇ ಸುಳ್ಳು ದೂರು ದಾಖಲಿಸಿದ್ದಾರೆ. ನಾನು ಅತ್ಯಂತ ಬಡವಳಾಗಿದ್ದೇನೆ. ಒಂದು ಕಡೆ ಎಲ್ಲಮ್ಮ ಕಡೆಯವರಿಂದ ಹಿಂಸೆ, ಮತ್ತೊಂದು ಕಡೆ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಹಾಗಾಗಿ ನಮ್ಮ ಮೇಲೆ ಹಲ್ಲೆ ಯತ್ನ ಮಾಡಿ ಜಾತಿ ನಿಂದನೆ ಮಾಡಿ ಗುಡಿಸಲುಗಳನ್ನು ಕನಿಕರವಿಲ್ಲದೆ ಕಿತ್ತು ಧಮ್ಕಿ ಹಾಕಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶಪ್ಪ, ಶಿವಕುಮಾರ್ ಇದ್ದರು.
