Homeಜಿಲ್ಲೆಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಆಗುಂಬೆ-ಸನ್‌ಸೆಟ್ ವ್ಯೂಪಾಯಿಂಟ್ ಭದ್ರತೆಯೇ ಪ್ರಶ್ನಾರ್ಥಕ!

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಆಗುಂಬೆ-ಸನ್‌ಸೆಟ್ ವ್ಯೂಪಾಯಿಂಟ್ ಭದ್ರತೆಯೇ ಪ್ರಶ್ನಾರ್ಥಕ!

Spread the love

ವಿಶೇಷ ವರದಿ: ರವಿಕುಮಾರ್ ಬಿ ಡಿ

ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಆಗುಂಬೆ, ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರನ್ನು ವರ್ಷಪೂರ್ತಿ ತನ್ನತ್ತ ಸೆಳೆಯುವ ಪ್ರಮುಖ ಪ್ರವಾಸಿ ತಾಣವಾಗಿದೆ. ಅದರಲ್ಲೂ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸನ್‌ಸೆಟ್ ವ್ಯೂ ಪಾಯಿಂಟ್ ಇದೀಗ ನಿರ್ಲಕ್ಷ್ಯದ ಕಾರಣದಿಂದ ಅಪಾಯದ ಅಂಚಿನಲ್ಲಿದೆ.

ಪ್ರವಾಸಿಗರ ಸುರಕ್ಷತೆಗಾಗಿ ನಿರ್ಮಿಸಲಾದ ತಡೆಗೋಡೆಗಳ ಸಿಮೆಂಟ್ ಸಂಪೂರ್ಣವಾಗಿ ಕಳಚಿಹೋಗಿದ್ದು, ಒಳಗಿರುವ ಕಬ್ಬಿಣದ ರಾಡುಗಳು ಹೊರಗೆ ಕಾಣಿಸುತ್ತಿವೆ. ಈ ರಾಡುಗಳು ತುಕ್ಕು ಹಿಡಿದು ದುರ್ಬಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಈ ಸ್ಥಳಕ್ಕೆ ಆಗಮಿಸುತ್ತಿರುವುದು ಅಪಘಾತದ ಭೀತಿಯನ್ನು ಹೆಚ್ಚಿಸಿದೆ.

ಕರ್ನಾಟಕದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್ ಹಾಗೂ ನಟಿ ಮಾಧವಿ ಅಭಿನಯದ ಆಕಸ್ಮಿಕ ಚಲನಚಿತ್ರದ ಒಂದು ಹಾಡಿನ ದೃಶ್ಯದಲ್ಲಿ ಈ ಸನ್‌ಸೆಟ್ ವ್ಯೂ ಪಾಯಿಂಟ್ ಕಾಣಿಸಿಕೊಂಡಿದ್ದು, ಹಾಡಿನ ಕೊನೆಯಲ್ಲಿ ಪಾತ್ರವೊಂದು ಕಣಿವೆಗೆ ಬಿದ್ದು ಸಾವನ್ನಪ್ಪುವ ದೃಶ್ಯ ಇಂದಿಗೂ ಪ್ರೇಕ್ಷಕರ ಮನದಲ್ಲಿ ಉಳಿದಿದೆ. ಅದು ಕೇವಲ ಸಿನಿಮಾದ ಕಥೆಯಾಗಿದ್ದರೂ, ನೈಜ ಜೀವನದಲ್ಲಿ ಅಂತಹ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ.

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ, ಹಾಳಾಗಿರುವ ತಡೆಗೋಡೆಗಳನ್ನು ತಕ್ಷಣ ತೆರವುಗೊಳಿಸಿ ಹೊಸದಾಗಿ ಬಲಿಷ್ಠ ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸಬೇಕು. ಜೊತೆಗೆ ವೀಕ್ಷಣಾ ಸ್ಥಳವನ್ನು ವ್ಯವಸ್ಥಿತಗೊಳಿಸಿ, ಎಚ್ಚರಿಕೆ ಫಲಕಗಳು, ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಹಾಗೂ ಅಗತ್ಯ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಮೈಸೂರಿನ ಶಿಕ್ಷಕಿ ಶ್ವೇತಾ ಪ್ರವಾಸಿಗರ ಆಗ್ರಹವಾಗಿದೆ.

ಯಾವುದೇ ಅನಾಹುತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಅಪಘಾತ ಸಂಭವಿಸುವ ಮೊದಲೇ ಸರ್ಕಾರ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರ ಜೀವಕ್ಕೆ ಭದ್ರತೆ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ.

ಸನ್ಸೆಟ್ ವ್ಯೂ ಪಾಯಿಂಟ್ ಅವ್ಯವಸ್ಥೆಯ ಬಗ್ಗೆ ದ ಸಂ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಶಾಂತರೆಡ್ಡಿ ರಾಯಚೂರು ಮಾತನಾಡಿ, ಪ್ರವಾಸಿಗರನ್ನ ಆಕರ್ಷಿಸುತ್ತಿರುವ ಆಗುಂಬೆಯ ಸನ್‌ಸೆಟ್ ವ್ಯೂ ಪಾಯಿಂಟ್ ಇಂದು ನಿರ್ಲಕ್ಷ್ಯದ ಸಂಕೇತವಾಗಿದ್ದು, ತಕ್ಷಣ ದುರಸ್ತಿ ಕಾರ್ಯಕ್ಕೆ ಗಟ್ಟಿಮುಟ್ಟಾದ ಮತ್ತು ಆಧುನಿಕ ಶೈಲಿಯ ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸುವುದು.

ಮುನ್ನೆಚ್ಚರಿಕಾ ಫಲಕಗಳು, ದುರಸ್ತಿ ಕಾರ್ಯ ಮುಗಿಯುವವರೆಗೆ ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಹತ್ತಿರ ಹೋಗದಂತೆ ಎಚ್ಚರಿಕೆ ಫಲಕಗಳು ಮತ್ತು ತಾತ್ಕಾಲಿಕ ಬೇಲಿಗಳನ್ನು ಅಳವಡಿಸಬೇಕಾಗಿದೆ.ರಾತ್ರಿಯ ಸಮಯದಲ್ಲಿ ಕತ್ತಲೆಯ ಕೋಣೆಯಾಗಿರುವ ಸನ್ಸೆಟ್ ವ್ಯೂ ಪಾಯಿಂಟ್ ರಾತ್ರಿಯ ಸಮಯದಲ್ಲಿ ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪಗಳ ಅಳವಡಿಕೆ ಹಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಆಗುಂಬೆಯ ಸನ್ಸೆಟ್ ವ್ಯೂ ಪಾಯಿಂಟ್  ನಲ್ಲಿ ತಡೆಗೋಡೆ ಹಾಗೂ ರಕ್ಷಣಾ ಬೇಲಿ ಸಂಪೂರ್ಣವಾಗಿ ದುರ್ಬಲಗೊಂಡು ಹಾಳಾಗಿರುವುದು ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ವಿಷಯವಾಗಿದೆ.

ಸುರಕ್ಷತೆಯ ಅಪಾಯ: ಪಶ್ಚಿಮ ಘಟ್ಟಗಳ ರಮಣೀಯ ಸೂರ್ಯಾಸ್ತ ಮತ್ತು ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರಕೃತಿ ಸೌಂದರ್ಯವನ್ನು ಸವಿಯುವಾಗ ಸಣ್ಣ ನಿರ್ಲಕ್ಷ್ಯ ಅಥವಾ ತಡೆಗೋಡೆ ಕುಸಿತ ದೊಡ್ಡ ಅವಘಡಕ್ಕೆ ಕಾರಣವಾಗಬಹುದು.

ಹವಾಮಾನದ ಪರಿಣಾಮ: ಮಲೆನಾಡಿನ ವಿಪರೀತ ಮಳೆ ಹಾಗೂ ಬಿಸಿಲಿಗೆ ಹಳೆಯ ಕಟ್ಟಡ/ತಡೆಗೋಡೆಗಳು ಶಿಥಿಲಗೊಂಡು, ಕೇವಲ ಕಬ್ಬಿಣದ ರಾಡುಗಳು ಹಾಗೂ ತಂತಿಗಳು ಮಾತ್ರ ಉಳಿದಿರುವುದು ತೀವ್ರ ಅಪಾಯವನ್ನು ಒಡ್ಡುತ್ತದೆ.
ತುರ್ತು ಕಾಯಕಲ್ಪದ ಅಗತ್ಯ.

ಪ್ರವಾಸಿಗರ ಪ್ರಾಣ ರಕ್ಷಣೆಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಆಡಳಿತ/ಸರ್ಕಾರ ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

ಸಸ್ಪೆನ್ಷನ್/ರಕ್ಷಣಾ ಗೋಡೆ ಮರುನಿರ್ಮಾಣ ಗಟ್ಟಿಮುಟ್ಟಾದ ಮತ್ತು ಆಧುನಿಕ ಶೈಲಿಯ ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸುವುದು.

ಮುನ್ನೆಚ್ಚರಿಕಾ ಫಲಕಗಳು: ದುರಸ್ತಿ ಕಾರ್ಯ ಮುಗಿಯುವವರೆಗೆ ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಹತ್ತಿರ ಹೋಗದಂತೆ ಎಚ್ಚರಿಕೆ ಫಲಕಗಳು ಮತ್ತು ತಾತ್ಕಾಲಿಕ ಬೇಲಿಗಳನ್ನು ಅಳವಡಿಸಬೇಕಾಗಿದೆ. ರಾತ್ರಿಯ ಸಮಯದಲ್ಲಿ ಕತ್ತಲೆಯ ಕೋಣೆಯಾಗಿರುವ ಸನ್ಸೆಟ್ ವ್ಯೂ ಪಾಯಿಂಟ್ ರಾತ್ರಿಯ ಸಮಯದಲ್ಲಿ ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪಗಳ ಅಳವಡಿಕೆ ಹಾಗಬೇಕಿದೆ

ಸಿಬ್ಬಂದಿ ನಿಯೋಜನೆ:

ಸನ್ಸೆಟ್ ವ್ಯೂ ಪಾಯಿಂಟ್ ನಲ್ಲಿ ಕೇವಲ ರಾತ್ರಿ 7:00ಯ ತನಕ ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಮತ್ತು ಜಾಗೃತಿ ಮೂಡಿಸಲು ಭದ್ರತಾ ಸಿಬ್ಬಂದಿಯನ್ನು ರಾತ್ರಿಯ ಸಮಯದಲ್ಲೂ ನಿಯೋಜಿಸಬೇಕಾಗಿದೆ.
ಈ ವಿಷಯವನ್ನು ಸ್ಥಳೀಯ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಗಮನಕ್ಕೆ ತರಲು ಸಾರ್ವಜನಿಕ ಮನವಿಗಳು ಹಾಗೂ ಪತ್ರಿಕಾ ವರದಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ.

ಸನ್ ಸೆಟ್ ವ್ಯೂ ಪಾಯಿಂಟ್ ಸಂಜೆ 7ರ ತನಕ ನೋಡಬಹುದು ಆದರೆ ರಾತ್ರಿ ಅಲ್ಲಿ ಓಡಾಡುವವರು 7 ಗಂಟೆಯ ನಂತರ ಆ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವುದು ಕತ್ತಲಲ್ಲಿ ಓಡಾಡೋದು ಮಾಡ್ತಾರೆ ಅಲ್ಲಿ ಯಾವುದೇ ರೀತಿ ಬೆಳಕಿನ ವ್ಯವಸ್ಥೆ ಇಲ್ಲದೆ.ಪ್ರವಾಸಿಗರು ಮಳೆಗಾಲದಲ್ಲಿ ಕಾಲು ಜಾರಿ ಬೀಳುವ ಸಂಭವ ಉಂಟು. ಇನ್ನು ಆ ಜಾಗದಲ್ಲಿ ರಾತ್ರಿಯ ಸಮಯದಲ್ಲಿ ಹೋಗದಂತೆ ಸಂಬಂಧಪಟ್ಟ ಇಲಾಖೆಯವರು ಬ್ಯಾರಿಕೆಟ್ ಅಥವಾ ಆ ಸ್ಥಳಕ್ಕೆ ಹೋಗದಂತೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾದ ಅವಶ್ಯಕತೆ ಇದೆ ಇಲ್ಲವಾದರೆ ಮಳೆಗಾಲದಲ್ಲಿ ಅನಾಹುತಗಳು ಆಗಬಹುದು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments