Homeಜಿಲ್ಲೆಸಿ.ಟಿ.ರವಿಯನ್ನು ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸಿ: ರಿಯಾಜ್ ಅಹಮದ್ ಆಗ್ರಹ

ಸಿ.ಟಿ.ರವಿಯನ್ನು ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸಿ: ರಿಯಾಜ್ ಅಹಮದ್ ಆಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.28

ದ್ವೇಷ ಭಾಷಣಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿ.ಟಿ.ರವಿ ಅವರನ್ನು ತಕ್ಷಣವೇ ಎಂಎಲ್‌ಸಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಅಧ್ಯಕ್ಷ ರಿಯಾಜ್ ಅಹಮದ್ ಆಗ್ರಹಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಬಿಜೆಪಿ ನಾಯಕರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮಾಧಾರಿತ ಹಾಗೂ ಪ್ರಚೋದನಕಾರಿ ಹೇಳಿಕೆಗಳು ಹೊರಬರುತ್ತಿವೆ. ಇದು ದೇಶದ ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಆತಂಕವನ್ನು ಉಂಟು ಮಾಡುತ್ತಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ಮಾಡಿರುವ ಅಕ್ಷೇಪಾರ್ಹ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು.

ಗಮನಿಸಿ: ಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ: ಪ್ರಭುಲಿಂಗ ಕವಳಿಕಟ್ಟಿ

ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಪ್ರತಾಪ್ ಸಿಂಹ ಮತ್ತು ಬಿವೈ. ವಿಜಯೇಂದ್ರ ಹಾಗೂ ಕೇಂದ್ರ ರಾಜಕೀಯ ನಾಯಕರ ಹೇಳಿಕೆಗಳು ಅನೇಕ ನಾಗರಿಕರಲ್ಲಿ ಮತ್ತು ಮುಸ್ಲಿಂ ಸಮುದಾಯದಲ್ಲಿ ನೋವು, ಆತಂಕ ಹಾಗೂ ಅಸಮಾಧಾನವನ್ನು ಉಂಟುಮಾಡಿವೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಪರಸ್ಪರ ವಿಶ್ವಾಸವನ್ನು ಕುಗ್ಗಿಸಿ, ಧರ್ಮಗಳ ನಡುವೆ ಅನಗತ್ಯ ಉದ್ವಿಗ್ನತೆ ಉಂಟು ಮಾಡುವ ಸಾಧ್ಯತೆ ಇದೆ ಎಂದರು.

ಮುಲ್ಲಾನಾ ಹಬೀಬುರ್ ರಹ್ಮಾನ್ ಲುಧಿಯಾನಿ ಅವರ ಕುಟುಂಬವು ಭಗತ್ ಸಿಂಗ್ ಅವರ ತಾಯಿಗೆ ದಮನದ ಸಮಯದಲ್ಲಿ ಆಶ್ರಯ ನೀಡಿದ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಿದ ರಿಯಾಜ್ ಅಹಮದ್, “ಇಂದು ಜಂತರ್ ಮಂತರ್ ನಲ್ಲಿ ಆಹಾರ ವಿತರಿಸಿದ ಜುನೈದ್ ನಿಗೂ ಇರುವ ಸಂಬಂಧವು ಭಾರತದ ಇತಿಹಾಸದ ಪುಟದ ಉತ್ತರವಾಗಿದ್ದು, ಇಂತಹ ಅನೇಕ ಉದಾಹರಣೆಗಳು ಇವೆ ಎಂದು ತಿಳಿಸಿದರು.

ಭಾರತವು ಸಂವಿಧಾನದ ಆಶಯಗಳಾದ ಸಮಾನತೆ, ಸಹಬಾಳ್ವೆ, ಸಹೋದರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ತತ್ವಗಳ ಮೇಲೆ ನಿರ್ಮಾಣಗೊಂಡ ದೇಶವಾಗಿದೆ. ರಾಜಕೀಯ ನಾಯಕರು ಜನರನ್ನು ಒಂದಾಗಿಸುವ ಜವಾಬ್ದಾರಿ ಹೊಂದಿದ್ದು, ಯಾವುದೇ ಸಮುದಾಯವನ್ನು ನೋಯಿಸುವ ಅಥವಾ ವಿಭಜನೆಗೆ ಕಾರಣವಾಗುವ ರೀತಿಯ ಭಾಷೆಯನ್ನು ಬಳಸಬಾರದು ಎಂದು ಆಗ್ರಹಿಸಿದರು.

“ನಾವು ಈ ಮೂಲಕ ಬಿಜೆಪಿ ರಾಷ್ಟ್ರೀಯ  ಹಾಗೂ ರಾಜ್ಯ ನಾಯಕತ್ವವನ್ನು ಒತ್ತಾಯಿಸುವುದೇನೆಂದರೆ, ಇಂತಹ ವಿವಾದಾತ್ಮಕ ಹೇಳಿಕೆಗಳ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿ. ಸಿ.ಟಿ. ರವಿ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಿ ಸೂಕ್ತ ಶಿಸ್ತು ಕ್ರಮಗಳನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments