ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.29
ಸಿ.ಟಿ. ರವಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ದ್ವೇಷ ಸಾಧಿಸುತ್ತಿದ್ದು, ಪೊಲೀಸರ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಬೆದರಿಕೆಗೆಲ್ಲಾ ಬಿಜೆಪಿ ಮಣಿಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಅವರು ಬುಧವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತಮ್ಮ ಸಂವಿಧಾನ ಬದ್ಧ ಮಾತನಾಡಿದ್ದು, ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕಾಂಗ್ರೆಸ್ ದ್ವೇಷ ರಾಜಕಾರಣದಿಂದ ಅವರನ್ನು ಬಂಧಿಸಲು ಹವಣಿಸುತ್ತಿದ್ದಾರೆ ಎಂದರು.
ಗಮನಿಸಿ: ಕೆಪಿಎಸ್‌ಸಿ ಅಕ್ರಮವನ್ನು ಪರಾದರ್ಶಕವಾಗಿ ತನಿಖೆ ನಡೆಸಲು ಆಗ್ರಹ
ರಾಜ್ಯದಲ್ಲಿ ಅನೇಕ ಕಡೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿಗಳು, ಹತ್ಯೆಗಳು ನಡೆಯುತ್ತಿವೆ. ರಾಷ್ಟçವಿರೋಧಿ ಘಟನೆಗಳು ಸಂಭಂವಿಸುತ್ತಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅದರ ಬಗ್ಗೆ ಗಮನ ಹರಿಸಬೇಕಿತ್ತುಲ. ಆದರೆ ಆ ಕೆಲಸ ಮಾಡದ ಬಿಜೆಪಿ ನಾಯಕ ವಿರುದ್ದ ಕ್ರಮಕ್ಕೆ ಸದಾ ಮುಂದಾಗುತ್ತಿದ್ದಾರೆ. ಇಂತಹ ಕ್ರಮಕ್ಕೆ, ಸುಳ್ಳು ಎಫ್‌ಐಆರ್, ಪೊಲೀಸ್ ಬೆದರಿಕೆ ಅಥವಾ ದಬ್ಬಾಳಿಕೆಗೆ ಬಿಜೆಪಿ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಿಜಯೇಂದ್ರ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತರು ಹಾಗೂ ಕಾನೂನು ತಜ್ಞರ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ಹೈಕೋರ್ಟ್ ನೀಡಿರುವ ಅಭಿಪ್ರಾಯವನ್ನು ಉಲ್ಲೇಖಿಸಿದರು.
ದೇಶಭಕ್ತರ ವಿರುದ್ಧವೇ ಪ್ರಕರಣ ದಾಖಲಿಸಿ, ಅಕ್ರಮ ವಲಸಿಗರಿಗೆ ರಕ್ಷಣೆ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಸೃಷ್ಟಿಸಿ, ಅವರಿಗೆ ನೆರವು ನೀಡಲಾಗುತ್ತಿದೆ. ಇದು ಅಲ್ಪಸಂಖ್ಯಾತರ ಓಲೈಕೆ ಹಾಗೂ ಮತಬ್ಯಾಂಕ್ ರಾಜಕಾರಣದ ಭಾಗವಾಗಿದೆ ಎಂದು ಟೀಕಿಸಿದರು.
