ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.29
ಜು.26 ರಂದು ಮಂಡ್ಯದ ಕೆ.ಆರ್ ಪೇಟೆ ಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಬಹಿರಂಗವಾಗಿ 2028 ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಸಕ್ರೀಯ ರಾಜಕಾರಣದಿಂದ ದೂರವಾಗುವುದಿಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಚುನಾವಣಾ ರಾಜಕೀಯ ನಿವೃತ್ತಿ’ ಯನ್ನು ಘೋಷಿಸಿದ್ದಾರೆ.
ಈ ಘೋಷಣೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರಿಗೆ ಇದು ನುಂಗಲಾರದ ತುಪ್ಪವಾದರೆ, ವಿರೋಧ ಪಕ್ಷದವರಿಗೆ ಸಂತಸ ತಂದಿದೆ.
ಗಮನಿಸಿ: ಸಿ.ಟಿ.ರವಿ ಪ್ರಕರಣ-ಬೆದರಿಕೆಗೆ ಬಿಜೆಪಿ ಮಣಿಯುವುದಿಲ್ಲ: ಬಿ.ವೈ.ವಿಜಯೇಂದ್ರ
ಈ ಸಂಬಂಧಪಟ್ಟಂತೆ ಬಿ.ವೈ. ವಿಜಯೇಂದ್ರ ಬುಧವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯ ನಿವೃತ್ತಿಯಿಂದ ಮುಂದಿನ ರಾಜಕೀಯ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿಳಲಿದೆ. ಸಿದ್ದರಾಮಯ್ಯ ಚಹರೆಯಿಂದ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಅವರು ಘೋಷಿಸಿರುವ ನಿವೃತ್ತಿಯಿಂದ ಕಾಂಗ್ರೆಸ್ ನಷ್ಟವಾಗಲಿದೆ ಎಂದರು.
2028 ರ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಹುಮತದಿಂದ ಗೆಲ್ಲುತ್ತೆವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ನಿವೃತ್ತಿಯಿಂದ ಕಾಂಗ್ರೆಸ್ ಗೆಲುವಿನ ಸ್ಥಾನ 50ಕ್ಕೆ ಕುಸಿಯಲಿದೆ ಎಂದು ಭವಿಷ್ಯ ನುಡಿದರು.
