ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.30
ಅಭಿಲಾಷ.ಎಂ ಅವರು “ಜಾನಪದ ಕಥನ ಕವನಗಳಲ್ಲಿ ಸ್ತ್ರೀತತ್ವದ ಪ್ರಾತಿನಿಧಿಕ ರೂಪಗಳು” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪ್ರದಾನ ಮಾಡಲಾಗಿದೆ.
ಗಮನಿಸಿ: ದೆಹಲಿಯಲ್ಲಿ ಕಾಲ ಕಳೆದ ಸರ್ಕಾರ-ಇಲ್ಲಿ ರೈತರ ಬದುಕು ಅಯೋಮಯ
ಅಭಿಲಾಷ ಎಂ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೇಶವಶರ್ಮ ಕೆ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ.
ಭದ್ರಾವತಿ ನಗರದ ಜನ್ನಾಪುರ ನಿವಾಸಿಯಾದ ನಿವೃತ್ತ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಬಿ ಮತ್ತು ಪಾರ್ವತಿ ಬಾಯಿ ದಂಪತಿಯ ಪುತ್ರಿಯಾಗಿದ್ದು, ಇವರ ಪತಿ ಡಾ. ನಾಗೇಶ ಬಿ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
