Homeಜಿಲ್ಲೆನಾಳೆ ಜಿಲ್ಲಾ ಸಂಘದಿಂದ ‘ಸಾಮಾಜಿಕ ಕಳಕಳಿಯೊಂದಿಗೆ’ ಪತ್ರಿಕಾ ದಿನಾಚರಣೆ (ರಕ್ತದಾನ ಶಿಬಿರ, ಹಿರಿಯ ಪತ್ರಕರ್ತರಿಗೆ ಸನ್ಮಾನ,...

ನಾಳೆ ಜಿಲ್ಲಾ ಸಂಘದಿಂದ ‘ಸಾಮಾಜಿಕ ಕಳಕಳಿಯೊಂದಿಗೆ’ ಪತ್ರಿಕಾ ದಿನಾಚರಣೆ (ರಕ್ತದಾನ ಶಿಬಿರ, ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ)

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1

ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದ್ದು, ಹಾಗಾಗಿ ಈ ಬಾರಿ ನಗರದಲ್ಲಿ ಪತ್ರಿಕಾ ದಿನಾಚರಣೆಯನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಸಾಮಾಜಿಕ ಕಳಕಳಿಯೊಂದಿಗೆ ನಡೆಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಯು.ವೈದ್ಯನಾಥ್ ತಿಳಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 2 ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಆರೋಗ್ಯ ದೃಷ್ಟಿಯಿಂದ ರಕ್ತದಾನನ ಶಿಬಿರ ಹಾಗೂ ನಿರಂತವಾಗಿ ಪತ್ರಿಕಾ ರಂಗದಲ್ಲಿ ಅಗಣ್ಯ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತರಿಗೆ ಹಾಗೂ ದತ್ತಿ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಲಾಗುವುದು. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದರು.

ಬೆಳಿಗ್ಗೆ ರಕ್ತದಾನ ಶಿಬಿರವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಎಚ್.ಪಿ. ಮದನ್ ಗೌಡ ಚಾಲನೆ ನೀಡಲಿದ್ದಾರೆ, ಪತ್ರಿಕಾ ದಿನಾಚರಣೆಯ ವೇದಿಕೆ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭಾಗವಹಿಸಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ವಿತರಿಸಲಿದ್ದು, ಪತ್ರಿಕೋದ್ಯಮದ ಇಂದಿನ ಸವಾಲುಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರದಮಲ್ಲಿ ಸಂಘದ ರಾಜ್ಯ ನಿರ್ದೇಶಕರಾದ ಕೆ.ವಿ. ಶಿವಕುಮಾರ್ ಹಾಗೂ ಎನ್. ರವಿಕುಮಾರ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ವಹಿಸಲಿದ್ದಾರೆ.

ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ:
ಅರಹತೊಳಲು ಕೆ. ರಂಗನಾಥ್
ನಾಗರಾಜ್ ಕಲ್ಕೊಪ್ಪ
ರಘು ಕುಮಾರ್
ಶಿವಪ್ಪ ಹಿತ್ಲೇರ್
ಟಿ.ಎಸ್. ಆನಂದ್ ಕುಮಾರ್
ರಾಮಚಂದ್ರ ಕೊಪ್ಪಲು
ಕೆ.ಹೆಚ್. ಹುಚ್ಚರಾಯಪ್ಪ
ರಾಜೇಶ್ ಭಡ್ತಿ
ಪಿ.ಎನ್. ನರಸಿಂಹಮೂರ್ತಿ

ದತ್ತಿ ಪ್ರಶಸ್ತಿಗೆ ಮೂವರು ಆಯ್ಕೆ:ಸನ್ಮಾನ

ಶಿವಮೊಗ್ಗದ ಹೊಸದಿಗಂತ ಪತ್ರಿಕೆಯ ಸ್ಥಾನಿಕ ಸಂಪಾದಕ ವಾದಿರಾಜ ಕಮರೂರು
ಭದ್ರಾವತಿಯ ಹಿರಿಯ ಪತ್ರಕರ್ತ ಕಣ್ಣಪ್ಪ
ಬೆಂಗಳೂರಿನ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಶ್ರೀಕಾಂತ ಭಟ್

ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ

ಶಿಕ್ಷಣ, ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತಿದೆ.

ಪ್ರತಿಭಾ ಪುರಸ್ಕೃತರು:
ಧ್ರುವ ಹೆಗಡೆ
ಭಾವನಾ ಎಸ್.
ಪ್ರೇರಣಾ ಕೆ. ರಾವ್
ಡಾ. ಕೆ.ಎಸ್. ಲಲಿತೇಶ್ವರಿ
ಎನ್. ಸಾನ್ವಿ
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎ.ಎನ್. ರಕ್ಷಾ

ಸಮಾಜಮುಖಿ ಕಾರ್ಯಕ್ರಮಕ್ಕೆ ಆಹ್ವಾನ

ಪತ್ರಿಕಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಸಾರಲಾಗುತ್ತಿದ್ದು, ಪತ್ರಕರ್ತರು, ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಸತ್ಯನಾರಾಯಣ, ಹುಚ್ಚ್ರಾಯಪ್ಪ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಸದಸ್ಯ ನಾಗರಾಜ್ ಶೆಣೈ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments