ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.11
ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರಿಂದ ಭಾರತ ಸರ್ಕಾರ ಅಮೇರಿಕಾದ ಸರಕುಗಳಿಗೆ ಅನುಮತಿ ನೀಡಬಾರದು ಮತ್ತು ಅಮೇರಿಕಾದ ಅವಲಂಬನೆ ಸಲ್ಲದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಅವರು ಮಂಗಳವಾರ ಪ್ರತಿಕಾಗೋಷ್ಠಿಯಲ್ಲಿ ಭಾರತ ಮತ್ತು ಅಮೇರಿಕಾ ಸಂಬಂಧಗಳ ಬಗ್ಗೆ ಇತಿಹಾಸದ ನೆನಪು ಮಾಡಿಕೊಂಡ ಅವರು, ಒಂದು ಕಾಲದಲ್ಲಿ ಅಂದರೆ 1965 ರಲ್ಲಿ ದೇಶದಲ್ಲಿ ಬರಗಾಲ ಭಯಂಕರವಾಗಿತ್ತು. ಅಮೇರಿಕಾದಿಂದ ಕೆಂಪು ಜೋಳ ಮುಂತಾದ ಪದಾರ್ಥಗಳು ಭಾರತಕ್ಕೆ ಬರುತ್ತಿತ್ತು. ಆಗ ಅಮೇರಿಕಾ ವಿಯಟ್ನಾಂ ಮೇಲೆ ಅನ್ಯಾಯವಾಗಿ ಯುದ್ದ ಸಾರಿತು. ಇದು ತಪ್ಪ ಎಂದು ಆಗೀನ ಭಾರತ ಪ್ರಧಾನಿ ಹೇಳಿದಕ್ಕೆ ಅಮೇರಿಕಾ ಭಾರತ ಕೊಡುವ ಪದಾರ್ಥಗಳನ್ನೆ ನಿಲ್ಲಿಸಿ ಬಿಟ್ಟಿತ್ತು. ಆಗ ಹಸಿವಿನಿಂದ ಭಾತರದಲ್ಲಿ ಅನೇಕ ಜನರು ಸಾವನ್ನೊಪ್ಪಿದ್ದರು ಎಂದು ನೆನಪು ಮಾಡಿಕೊಂಡರು.
ಗಮನಿಸಿ:
ಅಮೇರಿಕಾ ಅಧ್ಯಕ್ಷ ಟ್ರಂಪ್ ನಾಜೂಕತೆಯ ಮನುಷ್ಯನಾಗಿದ್ದಾನೆ. ಇದು ಭಾರತದ ಪ್ರಧಾನಿ ಮೋದಿ ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಜೊತೆಗೆ ದೇಶದ ಒಳಗಡೆಯೇ ಅಮೇರಿಕಾವನ್ನು ಬೆಂಬಲಿಸುವ ಶಕ್ತಿಗಳು ಕೂಡ ಹೆಚ್ಚಾಗುತ್ತಿವೆ. ಇದು ದೇಶಕ್ಕೆ ಅಪಾಯಕಾರಿಯಾಗಿದೆ. ಭಾತರ ಈಗಾಗಲೇ ಕೃಷಿ ಕ್ಷೇತ್ರದಲ್ಲಂತೂ ಸ್ವಾವಲಂಬಿಯಾಗಿದೆ. ರೈತರಿಗೆ ಮತ್ತಷ್ಟು ಶಕ್ತಿ ಕೊಡುವ ನಿಟ್ಟಿನಲ್ಲಿ ಅಮೇರಿಕಾದಿಂದ ರಫ್ತು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಜೊತೆಗೆ ರೈತರಿಗೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ಘೋಷಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಗೌಡ, ಉಮೇಶ್ ಪಾಟೀಲ್, ವಸಂತ್ ಕುಮಾರ್, ಮಂಜುನಾತ್ ಅರೆಕೊಪ್ಪ, ಸತೀಶ್.ಹೆಚ್.ಪಿ, ರೀಟಾ, ದಾನೇಶ್, ಬಸವರಾಜ್, ಶಂಕರ್, ಅಮೃತ್ ಇನ್ನಿತರರು ಇದ್ದರು.
