Homeಜಿಲ್ಲೆಅಧ್ಯಕ್ಷತೆ ಇಲ್ಲದ ವೇದಿಕೆ- ಈಡಿಗ ಮುಖಂಡರ ಆಕ್ರೋಶ

ಅಧ್ಯಕ್ಷತೆ ಇಲ್ಲದ ವೇದಿಕೆ- ಈಡಿಗ ಮುಖಂಡರ ಆಕ್ರೋಶ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.28

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾರಾಯಣ ಗುರು ಹಾಗೂ ನುಲಿದ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಈಡಿಗ ಸಮುದಾಯ ಮುಖಂಡರು ಉಪನ್ಯಾಸ ಆರಂಭದ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ನಾರಾಯಣಗುರು ಕುರಿತು ಉಪನ್ಯಾಸ ಆರಂಭವಾದಾಗ ವೇದಿಕೆ ಮುಂಭಾಗದಲ್ಲಿದ್ದ ಮುಖಂಡರು ಉಪನ್ಯಾಸವನ್ನು ತಡೆದಿದ್ದು, ವೇದಿಕೆ ಖಾಲಿ ಇದೆ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿರುವ ಶಾಸಕ ಮಧ್ಯೆ ಎದ್ದು ಹೋಗಿದ್ದಾರೆ. ಈ ಸ್ಥಿತಿಯಲ್ಲಿ ಉಪನ್ಯಾಸ ಮಾಡುತ್ತಿದ್ದಿರಾ ಎಂದು ಆಕ್ರೋಶ ಹೊರಹಾಕಿದರು. ಇಂತಹ ಕಾಟಚಾರಕ್ಕೆ ಕಾರ್ಯಕ್ರಮ ಮಾಡುವುದಾದರೆ ಮಾಡಲೇ ಬೇಡಿ ಎಂದು ಕೂಗಾಡಿದರು.

ಗಮನಿಸಿ: ಕಾಂಗ್ರೆಸ್‌ನಲ್ಲಿ ಕಡೆಗಣನೆ: ಅಲ್ಪಸಂಖ್ಯಾತರ ಆರೋಪ – ಪಕ್ಷ ಬೆಂಬಲಿಗರಿಗೆ ಅವಕಾಶ ಸಿಗಲಿ: ಆಯನೂರು ಮಂಜುನಾಥ್

ಉಸನ್ಯಾಸಕರಾದ ಪ್ರೊ. ಎಚ್.ಕಲ್ಲನ ಅವರು ಕೂಡ ಸಮುದಾಯ ಪರವಾಗಿ ಜಿಲ್ಲಾಡಳಿತದ ಮೇಲೆ ಅಸಮಾಧಾನ ಹೊರಹಾಕಿದರು.

ಜಿಲ್ಲಾಡಳಿತ ನಡೆಯಿಂದ ನಮ್ಮ ಸಮಾಜಕ್ಕೆ ತುಂಬಾ ಬೇಜಾರಾಗಿದೆ. ನನಗೆ ಈ ಕಾರ್ಯಕ್ರಮಕ್ಕೆ ಬರುವ ಮನಸ್ಸಿರಲಿಲ್ಲ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್ ಖುದ್ದಾಗಿ ಕರೆ ಮಾಡಿದಕ್ಕೆ ಗೌರವ ಕೊಟ್ಟು ಬಂದಿದ್ದೇನೆ. ಆದರೆ ನಾರಾಯಣ ಗುರು ಕಾರ್ಯಕ್ರಮದಲ್ಲಿ ಆ ಸಮುದಾಯವನ್ನು ದೂರವಿಟ್ಟು ಜಿಲ್ಲಾಡಳಿತ ಕಾರ್ಯಕ್ರಮ ಮಾಡುತ್ತಿರುವುದು ಸರಿ ಇಲ್ಲ. ಎಲ್ಲರನ್ನು ಸರಿದೂಗಿಸಿಕೊಂಡು ಮಾಡಬೇಕಾದ ಕಾರ್ಯಕ್ರಮ ಇದು ಆದರೆ ಇಲ್ಲಿ ಸಮುದಾಯದ ಜನಸಂಖ್ಯೆ ಕಡಿಮೆ ಇದೆ. ಈ ವಾತಾವರಣದಲ್ಲಿ ಮಾತನಾಡುವ ಮನಸ್ಥಿತಿ ನನಗೆ ಇಲ್ಲ. ಈ ರೀತಿಯಾಗಿ ಸಮುದಾಯವನ್ನು ಹೊರಗಿಟ್ಟು ಕಾರ್ಯಕ್ರಮ ಮಾಡುವುದಾದರೆ ಕಚೇರಿಯಲ್ಲಿ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments