Homeರಾಜಕೀಯರಾಜ್ಯವನ್ನು ದಿವಾಳಿ ಅಂಚಿಗೆ ತಳ್ಳಿದ ಕಾಂಗ್ರೆಸ್: ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ರಾಜ್ಯವನ್ನು ದಿವಾಳಿ ಅಂಚಿಗೆ ತಳ್ಳಿದ ಕಾಂಗ್ರೆಸ್: ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.24

ರಾಜ್ಯವನ್ನು ದಿವಾಳಿ ಅಂಚಿಗೆ ತಳ್ಳಿರುವ ಕಾಂಗ್ರೆಸ್‌ನ ಜನವಿರೋಧಿ ಸರ್ಕಾರದ ವಿರುದ್ಧ ಗುರುವಾರ ನಗರದ ಗೋಪಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿ ಅಂಚಿನಲ್ಲಿದೆ. ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ. ಬಡವರಿಗೆ, ರೈತರಿಗೆ ಪರಿಹಾರ ಕೊಡಲು ಹಣ ಇಲ್ಲ. ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ದಿನಗಳನ್ನು ಕಳೆಯುತ್ತಿದ್ದಾರೆ ಎಂದರು.

ಗಮನಿಸಿ: ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವುದರಲ್ಲಿ ವಿಳಂಬವಾಗುವುದಿಲ್ಲ: ರಿಷಿ ಆನಂದ್

ಕಳೆದ ಎರಡೂವರೆ ವರ್ಷದಲ್ಲಿ 4 ಲಕ್ಷ ಕೋಟಿಗೂ ಹೆಚ್ಚು ಹೊಸ ಸಾಲ ಮಾಡಿ, ಒಟ್ಟು ಸಾಲದ ಮೊತ್ತ 8 ಲಕ್ಷ ಕೋಟಿಗೆ ತಲುಪಿದೆ. ಹಣಕಾಸು ಇಲಾಖೆಯೇ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಇದು ಇತಿಹಾಸಲ್ಲೆ ಇದೇ ಮೊದಲು ಆರ್ಥಿಕ ಇಲಾಖೆ ಸರ್ಕಾರಕ್ಕೆ ಚಾಟಿ ಬೀಸಿರುವುದು. ಆದರೂ ಕರಾವಳಿ ಭಾಗಕ್ಕೆ ಹೋಗಿ 32 ಸಾವಿರ ಕೋಟಿ ಯೋಜನೆ ಘೋಷಣೆ ಮಾಡಿದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ.

ವಿಕಲಚೇತನರ ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ ಜಮೆಯಾಗುತ್ತಿಲ್ಲ. ಇವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಕೊಟ್ಟ ಶೂ, ಸಾಕ್ಸ್ ಕಳಪೆ ಗುಣಮಟ್ಟದ್ದಾಗಿದ್ದು,ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಶಿಕ್ಷಕರ ನೇಮಕಾತಿ ಇಲ್ಲ, ಶಿಕ್ಷಕರಿಗೆ ಸಂಬಳ ನೀಡಲು ಆಗುತ್ತಿಲ್ಲ. ಯುವಕರಿಗೆ ಉದ್ಯೋಗ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ರಾಜ್ಯದ ಹಣಕಾಸಿನ ವಾಸ್ತವ ಸ್ಥಿತಿ ಏನಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಬಿಡುಗಡೆ ಮಾಡಬೇಕು. ಖಜಾನೆಯಲ್ಲಿ ಹಣವಿಲ್ಲದೆ ಮಂತ್ರಿಗಳು ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ಸೂಡಾ ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಿಯಲ್ ಎಸ್ಟೆಟ್ ದಂಧೆ ಬಿಟ್ಟು ಬಿಡದಿಯ ಕಡೆ ಮುಖ ಮಾಡದೆ ರೈತ ನೈಜ ಸಮಸ್ಯೆಗಳತ್ತ ಮುಖ ಮಾಡಲಿ. ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲಿ. ಗ್ರಾಮ ಪಂಚಾಯಿತಿಗೆ ಕೇಂದ್ರ ಅನುದಾನ ಬಿಟ್ಟರೆ ರಾಜ್ಯ ನಯಾಪೈಸೆ ಬಂದಿಲ್ಲ. ಗ್ರಾಮಗಳಲ್ಲಿ ಮನೆಗಳನ್ನು ಕೊಟ್ಟಿಲ್ಲ. ಗಂಗಾಕಲ್ಯಾಣ ಬಂದಿಲ್ಲ. ದುಡ್ಡೆಲ್ಲಿದೆ ಗೊತ್ತಿಲ್ಲ. ಮೂಮದೆ ಕೆಎಸ್‌ಆರ್‌ಟಿಸಿ ಕೂಟ ಸೇವೆ ನಿಲ್ಲಿಸುಬ ಪರಿಸ್ಥಿತಿಯಲ್ಲಿದೆ. ಜನರ ಕ್ಷಮೆ ಕೇಳಿ ಇರುವ ವಿಚಾರವನ್ನು ಹೇಳಿ. ಇಲ್ಲವಾದರೆ ಮುಂದೆ ಜನ ಬೀದಿಗಿಳಿದರೆ ಆಡಳಿತ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಪ್ರಕೋಷ್ಠ ಸಂಯೋಜಕರಾದ ಎಸ್ ದತ್ತಾತ್ರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕ ಜಿ.ಡಿ.ಮಂಜುನಾಥ್ ಸೂಡಾದಲ್ಲಿ 25 ಲಕ್ಷ ಕಮೀಷನ್ ಕೇಳಿದಲ್ಲದೆ ಸರ್ಕಾರಿ ಅಧಿಕಾರಿಗಳ ಬಳಿ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವನ್ನ ಯಾವುದೇ ವಿರೋಧ ಪಕ್ಷ ಮಾಡಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕರು ಕಮಿಷನ್ ದಂಧೆ ನಿರತರಾಗಿರುವುದು ಸಾಬೀತಾಗಿದೆ ಎಂದು ದೂರಿದರು.

ಬಿಜೆಪಿ ಕಾರ್ಯಕರ್ತರು ಚೊಂಬು ಇಡಿದು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಸರ್ಕಾರದ ಅಣಕು ಶವಯಾತ್ರೆ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಎಸ್ ಜ್ಞಾನೇಶ್ವರ್, ಎನ್ ಜಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಮಾಲತೇಶ್, ಜಿಲ್ಲಾ ಪ್ರಕೋಷ್ಠ ಸಂಯೋಜಕರಾದ ಬಳ್ಳೆಕೆರೆ ಸಂತೋಷ್, ಶಿವಮೊಗ್ಗ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಭದ್ರಾವತಿ ಮಂಡಲದ ಅಧ್ಯಕ್ಷರಾದ ಧರ್ಮ ಪ್ರಸಾದ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷರಾದ ಮಲ್ಲೇಶಪ್ಪ, ಜಿಲ್ಲೆ ಹಾಗೂ ಶಿವಮೊಗ್ಗ ನಗರದ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಮೋರ್ಚಾದ ಪದಾಧಿಕಾರಿಗಳು, ಮಾಧ್ಯಮ ಸಂಚಾಲಕ ಎಸ್. ಚಂದಶೇಖರ್, ಎ.ಮಂಜುನಾಥ್, ಸುರೇಶ ಮುರುಳಿಧರ್, ರಶ್ಮಿ ಶ್ರೀನಿವಾಸ್, ಅನಿತಾ ರವಿಶಂಕರ್ ಹಾಗೂ ಪಕ್ಷದ ಪ್ರಮುಖರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments