Homeಜಿಲ್ಲೆನಾವು ನೋಡ್ಕೊಂತಿವಿ ಡಿವೈಎಸ್ಪಿ, ಹೋರಾಟ ನಮ್ಮ ಹಕ್ಕು: ಮಧುಸೂಧನ್

ನಾವು ನೋಡ್ಕೊಂತಿವಿ ಡಿವೈಎಸ್ಪಿ, ಹೋರಾಟ ನಮ್ಮ ಹಕ್ಕು: ಮಧುಸೂಧನ್

Spread the love

ಶಿವಮೊಗ್ಗ,ಅ.14 :  ಪೊಲೀಸ್ ಉಪರಕ್ಷಣಾಧಿಕಾರಿ ( ಡಿವೈಎಸ್ಪಿ) ಸಂಜೀವ್ ಕುಮಾರ್ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬರತೊಡಗಿದೆ.

ಜೆಎನ್ ಯು ವಿದ್ಯಾರ್ಥಿನಿಗೆ ಕಾಂಗ್ರೆಸ್ ಸಂಸದರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿನೆನ್ನೆ ( ಮಂಗಳವಾರ )ಶಿವಮೊಗ್ಗ ಜಿಲ್ಲಾ ಕಾಂಗೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುವಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿಗೆ ಸಿಬ್ಬಂದಿಯೊಂದಿಗೆ ಬಂದಿದ್ದ ಡಿವೈಎಸ್ಪಿ ಸಂಜೀವ್ ಕುಮಾರ್  ಕಚೇರಿಯಲ್ಲಿ ಯಾರೂ ಇರಬಾರದಾಗಿ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಸೋಮವಾರ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿದ್ದನ್ನು ಪ್ರಸ್ತಾಪಿಸಿದ್ದು,  ’ಕಚೇರಿಯಲ್ಲಿ ಯಾರೂ ಇರಬಾರದು, ಏನಾದ್ರೂ ಆದ್ರೆ ನಾನು ಯಾರನ್ನೂ  ಬಿಡೋಲ್ಲ,  ಅನಾವಶ್ಯಕವಾಗಿ ನೆನ್ನೆ ನೀವು ಮಾಡಿದಿರಿ,( ಸೋಮಣ್ಣ ಅವರ ಕಾರಿಗೆ ಮುತ್ತಿಗೆ) ಅದು ಅವಶ್ಯಕತೆ ಇರಲಿಲ್ಲ. ನಾವು ಏನು ಮಾಡಬೇಕೋ ಅದನ್ನು ಮಾಡ್ತಿವಿ. ನೀವು  ಏನು ಮಾಡ್ತಿರೋ ಮಾಡಿ, ನಾವು ರೆಡಿಇದಿವಿ. ಏನು ಆಕ್ಷನ್ ತೆಗೋಬೇಕೋ ಅದನ್ನು ತಗೋತಿವಿ.’ ಎಂದು ಬೆದರಿಕೆ ಹಾಕಿರುವ  ವಿಡಿಯೋ ಹರಿದಾಡುತ್ತಿದೆ.

ಇದಕ್ಕೆ ಉತ್ತರಿಸಿದ ಶಿವಮೊಗ್ಗ. ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಅವರು’ರಾಜ್ಯ ಅಧ್ಯಕ್ಷರು ಆದೇಶದಂತೆ ಮಾಡಿದ್ದೇವೆ. ನೀವು ಮಾಡಬೇಡಿ ಎಂದು ಹೇಳುವ ಅವಶ್ಯಕತೆ ಇಲ್ಲ. ಹೋರಾಟ ನಮ್ಮ ಹಕ್ಕು, ಮಾಡ್ತಿವಿ ಎಂದು ತಿರುಗೇಟು ನೀಡಿದ್ದಾರೆ.

ಈ ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು,  ಪೊಲೀಸರ ವರ್ತನೆ ಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಕೆಲವು ಪೊಲೀಸ್ ಅಧಿಕಾರಿಗಳು ಕಾಂಗ್ರೇಸ್ ಸರ್ಕಾರದಲ್ಲೂ ಮುಂದುವರೆದಿದ್ದು, ಬಿಜೆಪಿ ಪರ ಮನಸ್ಥಿತಿ ಹೊಂದಿದ್ದಾರೆ. ಎಂಬ ಆರೋಪ ಕಾಂಗ್ರೆಸ್ಸಿಗರಿಂದ ಕೇಳಿ ಬರುತ್ತಿದ್ದು, ಕಾಂಗ್ರೇಸ್ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿಗರನ್ನು ತಡೆಯುವ ಬದಲಿಗೆ ಕಾಂಗ್ರೆಸ್ ಕಚೇರಿಯಲ್ಲಿನ  ಕಾರ್ಯಕರ್ತರನ್ನು ಕಚೇರಿಯಿಂದ ಹೊರ ಹಾಕುವ ನಾವು ನೋಡಿಕೊಳ್ಳುತ್ತೇವೆ ಎಂಬ ಬೆದರಿಕೆ ಹಾಕುವ ಡಿವೈಎಸ್ಪಿ ಸಂಜೀವ್ ಕುಮಾರ್ ವರ್ತನೆ ಸರಿಯಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments