Homeಜಿಲ್ಲೆಹಿರಿಯ ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ಇನ್ನಿಲ್ಲ

ಹಿರಿಯ ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ಇನ್ನಿಲ್ಲ

Spread the love

ಶಿವಮೊಗ್ಗ,ಅ.12: ಹಿರಿಯ ಪತ್ರಕರ್ತರು, ವಾಯ್ಸ್ ಆಫ್ ಶಿವಮೊಗ್ಗದ ಶಿವಮೊಗ್ಗ ಪತ್ರಿಕೆಯ ಸಂಪಾದಕರು ಆಗಿದ್ದ ಭಂಡಿಗಡಿ ನಂಜುಂಡಪ್ಪ (75) ಇಂದು (ಸೋಮವಾರ) ಮಧ್ಯಾಹ್ನ ನಿಧನರಾದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರು ಪತ್ನಿ ಉಮಾ ಭಂಡಿಗಡಿ ಮತ್ತು ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ನಂಜುAಡಪ್ಪ ಅವರು ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ಪತ್ರಿಕೆ ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕರಾಗಿದ್ದ ಅವರು, ಪತ್ರಿಕೆಯನ್ನು ಅತ್ಯಂತ ಪ್ರೀತಿಯಿಂದ ಹಲವು ದಶಕಗಳ ಕಾಲ ಒಂದು ದಿನವು ಕಳೆವು ಆಗದಂತೆೆ ಜೋಪನವಾಗಿ ಪ್ರಕಟಿಸುತ್ತ ಬಂದವರು. ಪ್ರತಿ ದಿನವು ಪತ್ರಿಕೆಗಳನ್ನು ಅಂಚೆ ಮೂಲಕ ನಿಷ್ಠೆಯಿಂದ ಚಂದದಾರಾಗಿ ಸ್ವತಃ ಅಂಚೆ ಚೀಟಿ ಅಚ್ಚಿ ಪೋಸ್ಟ್ ಮಾಡುತ್ತಿದ್ದರು.

ಅತ್ಯಂತ ಸರಳ ಮತ್ತು ದೈವ ಭಕ್ತರಾಗಿದ್ದ ನಂಜುಂಡಪ್ಪನವರು ಪತ್ರಿಕಾ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿದ್ದರು, ರಾಷ್ಟ್ರೀಯ ಮಂಡಳಿ ಸದಸ್ಯರಾಗಿಯೂ ಕೂಡ ಹಲವು ವರ್ಷಗಳಿಂದ ಕರ್ತವ್ಯ ನಿಭಾಯಿಸಿದ್ದಾರೆ.

ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ನಂಜುಂಡಪ್ಪ ಪತ್ರಿಕಾ ಸಂಘಟನೆಯ ಎಲ್ಲಾ ಕೆಲಸಗಳಿಗೂ ಹಾಜರಾಗಿ ಉತ್ತೇಜನ ನೀಡುತ್ತಿದ್ದರು. ವಿಶೇಷವಾಗಿ ತಮ್ಮ ಇಳಿ ವಯಸ್ಸಿನಲ್ಲೂ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದರು.
ಯಾರೊಂದಿಗೂ ವಿರಸ ಮಾಡಿಕೊಳ್ಳದ ಅವರು ವೀರಶೈವ ಸಮಾಜದ ಮುಖಂಡರು ಆಗಿದ್ದರು. ಅವರ ನಿಧನಕ್ಕೆ ಹಲವು ಗಣ್ಯರು ಪತ್ರಕರ್ತ ಸಂಘಟನೆಗಳು, ರಾಜಕೀಯ ಮುಖಂಡರುಗಳು, ಸಮಾಜದ ಬಾಂಧವರು ಕಂಬನಿ ಮಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments