Homeಜಿಲ್ಲೆಪ್ರತಿಯೊಬ್ಬ ನಾಗರೀಕ ಸಸಿ ನೆಡುವ ಸಂಕಲ್ಪ ಮಾಡಬೇಕು; ಬಿ.ವೈ.ರಾಘವೇಂದ್ರ

ಪ್ರತಿಯೊಬ್ಬ ನಾಗರೀಕ ಸಸಿ ನೆಡುವ ಸಂಕಲ್ಪ ಮಾಡಬೇಕು; ಬಿ.ವೈ.ರಾಘವೇಂದ್ರ

Spread the love

ಶಿವಮೊಗ ಟೆಲೆಕ್ಸ್ ಸುದ್ದಿ, ಜೂ.9

ಪ್ರತಿ ಮನೆಯ ಮುಂದೆ ಸಸಿ ನೆಡುವ ಅಪೂರ್ವ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಹಸಿರು ಶಿವಮೊಗ್ಗ ಮತ್ತು ಸುಸ್ಥಿರ ಪರಿಸರದ ಆಶಯದೊಂದಿಗೆ, ಪಶು ವೈದ್ಯಕೀಯ ಕಾಲೇಜು ಮುಖ್ಯ ರಸ್ತೆ ನಿವಾಸಿಗಳ ಸಂಘ (ರಿ.), ಕಾಶಿಪುರ ಹಾಗೂ ಸ್ಟೇಟ್ ಪಿಯು ಕಾಲೇಜ್, ಶಿವಮೊಗ್ಗ ಇವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಘದ ಅಧಿಕೃತ ಉದ್ಘಾಟನೆಯನ್ನು ಅವರು ನೇರವೇರಿಸಿ ಮಾತನಾಡಿದರು.

ಗಮನಿಸಿ: ಪ್ರೊ. ಬಿ. ಕೃಷ್ಣಪ್ಪ ಸಾಮಾಜಿಕ ಇತಿಹಾಸದಲ್ಲಿ ಒಂದು ಹೊಸ ಯುಗ

ಈ ಸಂಘದ ಉದ್ಘಾಟನೆಯನ್ನು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ. ಸ್ಥಳೀಯ ನಿವಾಸಿಗಳು ಒಗ್ಗಟ್ಟಾದಾಗ ಮಾತ್ರ ಆ ಭಾಗದಲ್ಲಿ ಕೆಲಸ-ಕಾರ್ಯಗಳು ನಡೆಯುತ್ತದೆ. ಪಾಲಿಕೆ, ಎಂಎಲ್‌ಎ, ಎಂಪಿ ಅವರ ಗಮನಕ್ಕೆ ಆ ಭಾಗದಲ್ಲಿ ಕೊರತೆಯಿದ್ದರೆ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಲು ಸಂಘ-ಸಂಸ್ಥೆಯ ಅವಶ್ಯಕತೆ ಇದೆ. ಮನುಷ್ಯ ಸ್ನೇಹಜೀವಿಯಾಗಿದ್ದು, ಪ್ರಾಣಿಗಳಿಗೂ ಮನುಷ್ಯರಿಗೂ ವ್ಯತ್ಯಾಸವಿದೆ. ಮನುಷ್ಯರಾಗಿ ಬದುಕಬೇಕಾಗುತ್ತದೆ. ಅದಕ್ಕಾಗಿ ಈ ಸಂಘಟನೆಯನ್ನು ವನಮಹೋತ್ಸವದ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ.

ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಹಿಂದೆ ಶಿವಮೊಗ್ಗ ಹೇಗಿತ್ತು? ಮಕ್ಕಳು ಬೆಂಗಳೂರಿಗೆ ಉದ್ಯೋಗಕ್ಕೆ ಮತ್ತು ಶಿಕ್ಷಣಕ್ಕೆ ಹೋಗಬೇಕಾಗಿತ್ತು. ಬಿ.ಎಸ್.ವೈ. ಅಧಿಕಾರದಲ್ಲಿದ್ದಾಗ ವಿಜಯನಗರ ಸಾಮ್ರಾಜ್ಯದಂತೆ ಶಿವಮೊಗ್ಗ ಇತ್ತು. ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿಯಾಗಿತ್ತು. ಮೆಡಿಕಲ್ ಕಾಲೇಜು, ಅಗ್ರಿ ಕಲ್ಚರಲ್, ಹಾರ್ಟಿ ಕಲ್ಚರಲ್, ಇಂಟಿಗ್ರೇಟೆಡ್ ಯೂನಿರ್ವಸಿಟಿ, ವೆಟರ್ನರಿ ಕಾಲೇಜಿಗೆ ಹೋಗಲಿಕ್ಕೆ ರಸ್ತೆ ನಿರ್ಮಾಣವಾಯಿತು. ಆ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಜೊತೆಗೆ ಜಾಗದ ಸಮಸ್ಯೆ ಬಂದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಯಿತು. ನಾನೇ ನಿಂತು ಆ ಸಮಸ್ಯೆಯನ್ನು ಬಗೆಹರಿಸಿದ್ದೇನೆ ಎಂದರು.

ಶಿವಮೊಗ್ಗದಲ್ಲಿ ಈಗ ರೈಲ್ವೆ, ಹೈವೇ, ಏರ್‌ವೇ ಸಂಪರ್ಕ ಇದೆ. ಕೋಟೆಗಂಗೂರು, ಕೋಚಿಂಗ್ ಡಿಪೋ ಆದ ನಂತರ ವಿನೋಬನಗರ ಭಾಗದಲ್ಲೂ ರೈಲು ನಿಲುಗಡೆ ಮಾಡಬೇಕೆಂಬ ಬೇಡಿಕೆಯಿದೆ. ಇದನ್ನು ಕೂಡ ಈಗಾಗಲೇ ಸಂಬAಧಪಟ್ಟವರ ಗಮನಕ್ಕೆ ತಂದಿದ್ದೇನೆ. ರೈಲ್ವೆ ಹಳಿಗೆ ಸಿಲುಕಿ ಗೋವುಗಳು ಮೃತಪಟ್ಟ ಹಾಗೂ ರಾಜಾಕಾಲುವೆಗೆ ಬಿದ್ದು ಹಲವು ದೂರುಗಳಿದ್ದು, ಫೆನಿಷಿಂಗ್ (ಬೇಲಿ) ಮಾಡಬೇಕೆಂಬ ಬೇಡಿಕೆ ಇದೆ. ಅದನ್ನೂ ಕೂಡ ಮಾಡಲಾಗುವುದು ಎಂದರು. ಈ ಸರ್ಕಾರ ಬಂದ ಮೇಲೆ ಮಾತೆತ್ತಿದರೆ ಗ್ಯಾರಂಟಿಗೆ ಹಣ ನೀಡಿದ್ದೇವೆ ಎನ್ನುತ್ತಾರೆ. ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಒಳ್ಳೆಯ ದಿನ ಬಂದೇ ಬರುತ್ತದೆ. ಮತ್ತೆ ನಾವೆಲ್ಲರೂ ಸೇರಿ ಅಭಿವೃದ್ಧಿ ಮಾಡೋಣ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪ್ರತಿ ಮಳೆಗಾಲದಲ್ಲೂ ಇಲ್ಲಿ ನೀರು ನಿಲ್ಲುವ ಸಮಸ್ಯೆಯಿದೆ. ಈಗ ಅದಕ್ಕೆ ಶಾಶ್ವತ ಪರಿಹಾರಕ್ಕೆ ಮಹಾತ್ಮಾಗಾಂಧಿ ನಗರೋತ್ತಾನೆ ಯೋಜನೆಯಡಿ ಸತತ ಮೂರು ವರ್ಷಗಳ ಪ್ರಯತ್ನದಿಂದ ಅನುದಾನ ತಂದಿದ್ದೇವೆ. ಮುಂದಿನವಾರ ಇದಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ ಅಧಿಕಾರಿಗಳೊಂದಿಗೆ ಈ ಭಾಗದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ, ಸಂಘದ ಅಧ್ಯಕ್ಷ ನಟರಾಜ್, ಕಾರ್ಯದರ್ಶಿ ಸೋಮನಾಥ್, ಪ್ರಮುಖರಾದ ಧರ್ಮರಾಜ್, ದಿನೇಶ್, ಉಮೇಶ್, ಜಮದಗ್ನಿ ಭಟ್, ಪೂಣಿಮಾ, ಮೌನೇಶ್, ಪ್ರಶಾಂತ್, ರವಿಕುಮಾರ್, ರಮೇಶ್ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments