Homeಜಿಲ್ಲೆಎಸ್‌ಐಆರ್ ನಿಂದ ಕಾಂಗ್ರೆಸ್‌ಗೆ ಓಟ್ ಬ್ಯಾಂಕ್ ಕೈ ತಪ್ಪುವ ಆತಂಕ:ಕೆ ಎಸ್ ಈಶ್ವರಪ್ಪ

ಎಸ್‌ಐಆರ್ ನಿಂದ ಕಾಂಗ್ರೆಸ್‌ಗೆ ಓಟ್ ಬ್ಯಾಂಕ್ ಕೈ ತಪ್ಪುವ ಆತಂಕ:ಕೆ ಎಸ್ ಈಶ್ವರಪ್ಪ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.30

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್‌ಐಆರ್ ನಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಕೈ ತಪ್ಪುವ ಆತಂಕದಲ್ಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

ಮಂಗಳವಾರ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನೈಜ ಮತ್ತು ಉತ್ಕೃಷ್ಟ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಒಂದು ಸಮಗ್ರ ಪ್ರಕ್ರಿಯೆ ಆಗಿದ್ದು, ಇದನ್ನು ಪ್ರಜಾಪ್ರಭುತ್ವದ ಮಾರಣಹೋಮ ಎಂದು ಕರೆಯುತ್ತಿರುವ ಕಾಂಗ್ರೇಸ್ಸಿಗರ ಹೇಳಿಕೆಗಳು ಖಂಡನೀಯ ಎಂದರು.

ಗಮನಿಸಿ: ಅಪ್ಪನ ವಿರುದ್ಧ ನಡೆದ ಷಡ್ಯಂತ್ರ ಮಗನ ವಿರುದ್ಧವೂ ನಡೆಯುತ್ತಿದೆ.ಡಿವಿಎಸ್ ವಿರುದ್ಧ ಮುಗಿಬಿದ್ದ ಬಿವೈವಿ ಫ್ಯಾನ್

ಎಸ್‌ಐಆರ್ ನಿಂದಾಗಿ ಕೆಲವು ದೇಶದ್ರೋಹಿ ಮುಸಲ್ಮಾನರು ಎರಡು-ಮೂರು ಕಡೆ ಮತದಾರರಾಗಿದ್ದುಕೊಂಡು ಮತ ಚಲಾಯಿಸುವುದು ಇದರಿಂದ ತಪ್ಪುತ್ತದೆ, ಅಕ್ರಮವಾಗಿ ಭಾರತದೊಳಗೆ ನುಸುಳಿರಿವ ಬಾಂಗ್ಲಾ ನುಸುಳುಕೋರರು ಪತ್ತೆ ಆಗಲಿದ್ದು, ಇವರ ಓಟುಗಳು ಕೈ ತಪ್ಪಿ ಹೋಗಲಿವೆ ಎಂಬ ಆತಂಕದಿAದ ಕಾಂಗ್ರೆಸ್ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿದೆ ಎಂದು ಈಶ್ವರಪ್ಪ ಅರೋಪಿಸಿದರು.

ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ನಡೆಯುವುದು ಕಾಂಗ್ರೆಸ್‌ಗೆ ಬೇಡವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಾಂಗ್ರೆಸ್‌ನ ಓಟ್ ಬ್ಯಾಂಕ್‌ಗಳಾದ ಎಸ್‌ಐಆರ್‌ನಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಯವರ ಹೆಸರನ್ನು ಕೈಬಿಡುವ ಹುನ್ನಾರ ನಡೆದಿದೆ ಎಂದು ಹೇಳುತ್ತಿರುವ ಸಿದ್ಧರಾಮಯ್ಯನವರು ಕೇರಳ ಮತ್ತು ತಮಿಳುನಾಡಿನ ಫಲಿತಾಂಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? ಮತದಾರರ ಪಟ್ಟಿಯಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಹೆಸರನ್ನು ಕಲೆ ಹಾಕುವುದಿಲ್ಲ. ಹಾಗಿದ್ದಾಗ ಇವರನ್ನು ಹೇಗೆ ಕೈಬಿಡಲು ಸಾಧ್ಯ ಎಂಬ ಕನಿಷ್ಠ ಜ್ಞಾನ ಕೂಡ ಸಿದ್ಧರಾಮಯ್ಯನವರಿಗೆ ಇಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದರು.

ಜವಾಬ್ದಾರಿಯುತ ನಾಗರೀಕರು ನಿಮ್ಮ ಸುತ್ತಮುತ್ತಲು ಅನುಮಾನಾಸ್ಪದ ಬಾಂಗ್ಲಾ ನುಸುಳುಕೋರ ವ್ಯಕ್ತಿಗಳಿದ್ದರೆ ಮತದಾರರ ಪಟ್ಟಿಯಲ್ಲಿ ಸೇರದಂತೆ ನಿಗಾವಹಿಸಿ. ಮನೆ ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನಲೆಯಲ್ಲಿ ಪರಿಶೀಲಿಸಿ ಬಾಡಿಗೆ ಕೊಡಬೇಕು. ಶಿವಮೊಗ್ಗದಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆಗೆ ರಾಷ್ಟçಭಕ್ತರ ಬಳಗ ಸಂಪೂರ್ಣ ಬೆಂಬಲ ನೀಡಲಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರಿಗೆ ಎನ್ಯೂಮರೇಷನ್ ಫಾರಂ ಭರ್ತಿಮಾಡಲು ಬಿಎಲ್‌ಓಗಳೊಂದಿಗೆ ಕೈಜೋಡಿಸಲಿದ್ದಾರೆ. ಬಿಎಲ್‌ಎಗಳು ಪ್ರತಿ ಮನೆಗೆ ಬರುತ್ತಾರೆ. ಅವರ ಜೊತೆ ನಿಮ್ಮ ಕಾರ್ಯಕರ್ತರನ್ನು ಕೂಡ ಕಳುಹಿಸಿ ಎಂದು ಕಾಂಗ್ರೆಸ್ಸಿಗರಿಗೆ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಮೇಯರ್ ಸುವರ್ಣಾಶಂಕರ್, ಬಾಲು, ಶಿವಾಜಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments