Homeಜಿಲ್ಲೆಸತ್ಯವನ್ನು ಜನರಿಗೆ ತಲುಪಿಸುವುದು ಪತ್ರಕರ್ತರ ಜವಾಬ್ದಾರಿ: ವೈ.ಗ.ಜಗದೀಶ್

ಸತ್ಯವನ್ನು ಜನರಿಗೆ ತಲುಪಿಸುವುದು ಪತ್ರಕರ್ತರ ಜವಾಬ್ದಾರಿ: ವೈ.ಗ.ಜಗದೀಶ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.27

ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿರುವ ಇಂದಿನ ಕಾಲಘಟ್ಟದಲ್ಲಿ ಸತ್ಯವನ್ನು ಪರಿಶೀಲಿಸಿ, ನಿಷ್ಪಕ್ಷಪಾತಮಾಹಿತಿಯನ್ನು ಜನರಿಗೆ ತಲುಪಿಸುವುದು ಪತ್ರಕರ್ತರ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ ಎಂದುಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ರಾಜಕೀಯ ವಿಶ್ಲೇಷಕ ವೈ.. ಜಗದೀಶ್ ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಶಿಕಾರಿಪುರ ಘಟಕದವತಿಯಿಂದ ಸೋಮವಾರ ಪಟ್ಟಣದಸುದ್ದಿಮನೆಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಕಾರ್ಯಕ್ರಮದಲ್ಲಿಇಂದಿನ ಮಾಧ್ಯಮಗಳ ಸ್ಥಿತಿಗತಿಕುರಿತು ಪ್ರಧಾನ ಭಾಷಣ ಮಾಡಿದರು.

ಗಮನಿಸಿ: ದಲಿತ ಮಹಿಳೆಗೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ

ಇಂದಿನ ಮಾಧ್ಯಮಗಳು ಟಿಆರ್‌ಪಿ ಪೈಪೋಟಿಯಲ್ಲಿ ಸಿಲುಕಿದ್ದು, ವೇಗದ ಸುದ್ದಿಯ ಭರದಲ್ಲಿ ಸತ್ಯಕ್ಕೆ ಧಕ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಒಂದು ಕಾಲದಲ್ಲಿ ಜನರು ಬೆಳಿಗ್ಗೆ ಪತ್ರಿಕೆಗಾಗಿ ಕಾತರದಿಂದ ಕಾಯುತ್ತಿದ್ದರು. ಏಕೆಂದರೆ ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿ ಪರಿಶೀಲಿತ ಮತ್ತು ವಿಶ್ವಾಸಾರ್ಹ ಎನ್ನುವ ನಂಬಿಕೆ ಇತ್ತು. ಇಂದಿಗೂ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುದ್ರಣ ಮಾಧ್ಯಮದ ದೊಡ್ಡ ಜವಾಬ್ದಾರಿಯಾಗಿದೆಎಂದು ಹೇಳಿದರು.

ಕಾಲ ಬದಲಾಗಿದ್ದು, ಈಗ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಡಿಜಿಟಲ್ ವೇದಿಕೆಗಳ ಮೂಲಕವೂ ಜನರನ್ನು ತಲುಪಬೇಕಾದ ಅಗತ್ಯ ಎದುರಾಗಿದೆ. ಹೊಸ ತಲೆಮಾರಿನ ಓದುಗರು ಮತ್ತು ವೀಕ್ಷಕರನ್ನು ತಲುಪಲು ಮಾಧ್ಯಮಗಳು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಕಳೆದ 78 ವರ್ಷಗಳಿಂದ ಜನರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. ಆರ್ಥಿಕ ಮತ್ತು ವ್ಯಾಪಾರಿಕ ಸವಾಲುಗಳಿಂದ ಕೆಲವು ಬದಲಾವಣೆಗಳಾಗಿದ್ದರೂ, ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೌಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಸಂಭಾಷಣೆಯನ್ನು ಸ್ಮರಿಸಿದ ಅವರು, ಆಡಳಿತದಲ್ಲಿದ್ದಾಗ ಸರ್ಕಾರದ ವಿರುದ್ಧ ವರದಿ ಮಾಡಿದ್ದಕ್ಕಾಗಿ ಟೀಕಿಸುತ್ತಿದ್ದರೂ, ನಂತರ ನಿಷ್ಪಕ್ಷಪಾತ ಪತ್ರಿಕೋದ್ಯಮದ ಮಹತ್ವವನ್ನು ಅವರು ಒಪ್ಪಿಕೊಂಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಯುಡಬ್ಲ್ಯೂಜೆ ತಾಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಎಂ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್(ಟೆಲೆಕ್ಸ್), ಜಿಲ್ಲಾ ಅಧ್ಯಕ್ಷ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ಕಾರ್ಯದರ್ಶಿ ದೀಪಕ್ ಸಾಗರ್, ಸಂಘಟನಾ ಕಾರ್ಯದರ್ಶಿ ಗಾ.ರಾ. ಶ್ರೀನಿವಾಸ್, ಜಿಲ್ಲಾ ನಿರ್ದೇಶಕ ರಾಜಾರಾವ್ ಜಾದವ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕೋಟೇಶ್ವರ, ಪತ್ರಕರ್ತ ಆರುಂಡಿ ಶ್ರೀವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments