Homeರಾಜಕೀಯಮೋದಿ ಪ್ರಚಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ- ‘ಎಕ್ಸ್’ ನಲ್ಲಿ ಪೋಸ್ಟ್!?

ಮೋದಿ ಪ್ರಚಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ- ‘ಎಕ್ಸ್’ ನಲ್ಲಿ ಪೋಸ್ಟ್!?

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.10

ಮೋದಿ ಸರ್ಕಾರದ ಜಾಹೀರಾತುಗಳ ಪ್ರಭಾವದಿಂದ ಕೆಲವು ಸುದ್ದಿ ಸಂಸ್ಥೆಗಳು ‘ಪಿಆರ್ ಏಜೆನ್ಸಿ’ಯಂತೆ ವರ್ತಿಸುತ್ತಿದ್ದು, ವಿರೋಧ ಪಕ್ಷಗಳ ನಾಯಕರ ಮಾತುಗಳನ್ನು ತಿರುಚಿ ತಪ್ಪಾಗಿ ಬಿಂಬಿಸುವ ಮೂಲಕ ಮೋದಿ ಸರ್ಕಾರದ ಪರವಾಗಿ ಪ್ರಚಾರ ಮಾಡುತ್ತಿವೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಸೋಮವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಮೋದಿ ಸರ್ಕಾರ ಪರವಾಗಿ ಸುದ್ದಿ ಭಿತ್ತರಿಸುತ್ತಿರುವ ಮಾಧ್ಯಮ ಸಂಸ್ಥೆಗಳ ವಿರುದ್ದ ಹಾಗೂ ಅದರಿಂದ ಉಂಟಾಗುತ್ತಿರುವ ಸುಳ್ಳು ಪ್ರಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

‘ಪಿಆರ್ ಜೀವಿ’ (ಪ್ರಚಾರ ಪ್ರಿಯ) ಪ್ರಧಾನ ಮಂತ್ರಿ ಮೋದಿ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಪ್ರಚಾರಕ್ಕೆ ಪ್ರತಿದಿನ ಸರಾಸರಿ 1.5 ಕೋಟಿ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಿದ್ದು, 2014-15 ಮತ್ತು 2024-25ರ ನಡುವೆ ಸರ್ಕಾರಿ ಜಾಹೀರಾತುಗಳಿಗಾಗಿ 5,987.46 ಕೋಟಿ ಖರ್ಚು ಮಾಡಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಮುದ್ರಣ ಮಾಧ್ಯಮದ ಜಾಹೀರಾತುಗಳಿಗಾಗಿ 910.4 ಕೋಟಿ ಖರ್ಚು ಮಾಡಲಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ, ಅಂದರೆ ಪ್ರಚಾರಕ್ಕಾಗಿ 2023-24 ರಲ್ಲಿ ಈ ವೆಚ್ಚವು 353.98 ಕೋಟಿಗೆ ಏರಿಕೆಯಾಯಿತು ಹಾಗೂ 2024-25 ರಲ್ಲೂ ಇದು ಮತ್ತೇ 323.41 ಕೋಟಿ ಏರಿಕೆ ಕಂಡಿತ್ತು.

ಮೋದಿ ಸರ್ಕಾರದ ಪ್ರಚಾರಕ್ಕಾಗಿ ತೆರಿಗೆದಾರರ ಹಣವನ್ನು ಈ ರೀತಿ ಜಾಹೀರಾತಿಗಾಗಿ ಬಳಕೆ ಮಾಡುತ್ತಿದ್ದು, ಇದರ ಲಾಭ ಪಡೆದ ಕೆಲವು ಸುದ್ದಿ ಸಂಸ್ಥೆಗಳು ಮೋದಿಯ ಪಿಆರ್ ಏಜೆನ್ಸಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ವಿರೋಧ ಪಕ್ಷದ ನಾಯಕರ ಮಾತುಗಳನ್ನು ತಿರುಚಿ ತಪ್ಪಾಗಿ ಬಿಂಬಿಸುತ್ತಾ ಮೋದಿ ಪರವಾಗಿ ವರದಿ ಮಾಡಿ ಜನರನ್ನು ಮೋಸಗೊಳಿಸುತ್ತಿದ್ದಾರೆ.

ಇಂತಹ ಮೋದಿ ಮೀಡಿಯಾದಿಂದಲ್ಲೇ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತವು 157ನೇ ಸ್ಥಾನಕ್ಕೆ ಕುಸಿದಿರುವುದು. ಇದು ಆಶ್ಚರ್ಯ ಪಡುವ ಸಂಗತಿಯೆನಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments