Homeಜಿಲ್ಲೆಸೆ.30:ಶಿಕಾರಿಪುರದಲ್ಲಿ ‘ಭಾರತ್ ಜೋಡೋ’ ಪಾದಯಾತ್ರೆ- ಬೃಹತ್ ಸಮಾವೇಶ

ಸೆ.30:ಶಿಕಾರಿಪುರದಲ್ಲಿ ‘ಭಾರತ್ ಜೋಡೋ’ ಪಾದಯಾತ್ರೆ- ಬೃಹತ್ ಸಮಾವೇಶ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.28

ಕಳೆದ 4 ವರ್ಷದ ಹಿಂದೆ ಈ ದೇಶದ ಚುನಾವಣಾ ವ್ಯವಸ್ಥೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ದ ರಾಹುಲ್ ಗಾಂಧಿ ನಡೆಸಿದ ‘ಭಾರತ್ ಜೋಡೋ’ ನೆನಪಿಗಾಗಿ ಸೆ. 30 ರಂದು ಶಿಕಾರಿಪುರದಲ್ಲಿ ಬೃಹತ್ ಸಮಾವೇಶ ಹಾಗೂ ಪಾದಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಾಹುಲ್ ಗಾಂಧಿ ಅವರ ನಡೆಸಿದ ಭಾರತ್ ಜೋಡೋ ಪಾದಯಾತ್ರೆಗೆ ಇದೇ ಸೆ.30 ರಂದು 4 ವರ್ಷ ಪೂರೈಸಲಿದ್ದು, ಈ ಪಾದಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದೇಶ ಹಾಗೂ ರಾಜ್ಯಗಳಲ್ಲಿ ಇನ್ನಷ್ಟು ಶಕ್ತಿ ಬಂದಿದೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಇದನ್ನು ಸಂಭ್ರಮಿಸಲು ಮುಂದಾಗಿದೆ ಎಂದರು.

ಗಮನಿಸಿ: ಪೊಲೀಸ್ ವಾಹನಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಂಡಿದ್ದಿರೆಂಬುದು ಗೊತ್ತಿದೆ: ಮಧು

ಈ ಪಾದಯಾತ್ರೆಯೂ ಕರ್ನಾಟಕಕ್ಕೆ ಆಗಮಿಸಿದ್ದು ಗುಂಡ್ಲುಪೇಟೆ ಜಿಲ್ಲೆಯಿಂದ ನಾನು ಕೂಡ ಅಲ್ಲಿಂದಲ್ಲೇ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೆಗೆ ಹೆಜ್ಜೆ ಹಾಕಿದೆ. ಆದರೆ ಈಗ ಇದರ 4 ವರ್ಷದ ಸಂಭ್ರಮವನ್ನು ಶಿಕಾರಿಪುರದಲ್ಲಿ ನಡೆಸಲು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ನಿರ್ಣಯಿಸಿದ್ದಾರೆ. ಇದಕ್ಕೆ ಬಿ.ಕೆ.ಹರಿಪ್ರಸಾದ್  ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.

ರಾಹುಲ್ ಗಾಂಧಿ ಅವರು ಅಧಿಕಾರದ ಆಸೆ ಪಟ್ಟವರಲ್ಲ. ದೆಹಲಿಯಲ್ಲಿ ಎಸಿ ರೂಂ ನಲ್ಲಿ ಕುಳಿತುಕೊಂಡು ಈಡಿ, ಐಟಿ ಬಳಸಿಕೊಂಡು ರಾಜಕಾರಣ ಮಾಡುವವರಲ್ಲ. ಅವರೂ ಸದಾ ಸಾಮಾನ್ಯ ಜನರೊಂದಿಗೆ ಹೆಜ್ಜೆ ಹಾಕಿ ಅವರ ಕಷ್ಟ ಸುಖಗಳನ್ನು ಆಲಿಸಿ ಅವರಿಗಾಗಿ ಮುಂದಿನ ದಿನಗಳಲ್ಲಿ ಏನಾದರೂ ಉತ್ತಮ ಕೆಲಸ ಮಾಡಬೇಕೆಂಬ ಚಿಂತನೆಯಲ್ಲಿರುವವರು. ಅಂತಹ ವ್ಯಕ್ತಿಯ ಪಾದಯಾತ್ರೆಯಿಂದಲೆ ಇವತ್ತು ನಾವೆಲ್ಲಾ ಅಧಿಕಾರವನ್ನು ಪಡೆದಿರುವುದು. ಅವರೊಂದಿಗೆ ಹೆಜ್ಜೆ ಹಾಕಿರುವುದು ನಮ್ಮ ಪುಣ್ಯ ಎಂದರು.

ಪಾದಯಾತ್ರೆಯ ಮಾರ್ಗ:

ಬೆಳಿಗ್ಗೆ 10 ಗಂಟೆಗೆ ಕಿತ್ತದಂಡಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಕೋಟೆ, ಹೊಸನಗರ, ಮಟ್ಟಿಕೊಟೆ, ಹೊಸನಗರ ಕ್ರಾಸ್, ನೆಲವೋಡ್ಲು ಮಾರ್ಗವಾಗಿ ಶಿಕಾರಿಪುರವನ್ನು ತಲುಪುತ್ತದೆ. ಬಳಿಕ ಎಪಿಎಂಸಿ ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ಪಾದಯಾತ್ರೆ ಹಾಗೂ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗಮಿಸುವರು ಎಂದು ತಿಳಿಸಿದರು.

ಈ ಪಾದಯಾತ್ರೆ ಶಿಕಾರಿಪುರದಲ್ಲಿ ಐತಿಹಾಸಿಕ ಘಟನೆಯಾಗಿ ಉಳಿಯಲಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯನ್ನು ಕೂಡ ಇಲ್ಲಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments