ಶಿವಮೊಗ್ಗ ಟೆಲೆಕ್ಸ್,ಸೆ.28
ತಾವು ಹೇಗೆ ಗೆದ್ದು ಬಂದಿದ್ದಿರಾ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಂಡಿದ್ದಿರಾ? ಎಂಬುದು ಚೆನ್ನಾಗಿ ನಮಗೆ ಗೊತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಬಿ.ವೈ.ರಾಘವೇಂದ್ರ ವಿರುದ್ದ ಹರಿಹಾಯ್ದರು.
ಸೊರಬದಲ್ಲಿ ಗೆದ್ದು ಬನ್ನಿ ಎಂಬ ಬಿ.ವೈ.ರಾಘವೇಂದ್ರ ಅವರು ಹೇಳಿಕೆಗೆ ಸೋಮವಾರ ಮಾಧ್ಯಮಗಳ ಮೂಲಕ ಕಿಡಿಕಾರಿದರು.
ಬಿ.ವೈ. ರಾಘವೇಂದ್ರ ಒಂದು ತರ ಶಕುನಿ ಇದ್ದಾಗೆ. ಶಿಕಾರಿಪುರದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮಕ್ಕೆ ನಾಮಕವಸ್ಥೆಯಾಗಿದೆ ಬಂದು ಹೋಗಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಗಮನಿಸಿ: ವಿಜಯೇಂದ್ರರನ್ನ ಸೋಲಿಸುವುದೇ ನಮ್ಮ ಗುರಿ: ಮಧು ಶಪಥ
“ಮಾಧ್ಯಮಗಳನ್ನು ಬಳಸಿಕೊಂಡು ಬಿ.ವೈ.ವಿಜಯೇಂದ್ರ ಬಳ್ಳಾರಿ ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಮಾಧ್ಯಮಗಳು ಇದನ್ನು ಮುನ್ನೆಲೆಗೆ ತರದೆ ಸತ್ಯವನ್ನು ಬರೆಯಿರಿ. ಮಾಧ್ಯಮದ ಶಕ್ತಿಯೇ ಸತ್ಯ ಬರೆಯುವುದು. ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಿರಿ,” ಎಂದು ಪತ್ರಕರ್ತರಿಗೆ ಸಚಿವರು ಕಿವಿಮಾತು ಹೇಳಿದರು.
