ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.29
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಿ ಎ ಎಂದು ಹೆಸರೇಳಿಕೊಂಡು 15 ಲಕ್ಷ ವಂಚನೆ ಮಾಡಿದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಹಂಚಿ ರವರಿಗೆ ರಿ ಕ್ರಿಯೇಷನ್ ಕ್ಲಬ್ ಲೈಸನ್ಸ್ ಕೊಡಿಸುವುದಾಗಿ ಮುಖ್ಯಮಂತ್ರಿಯವರ ಡಿ.ಕೆ ಶಿವಕುಮಾರ್ ಪಿ.ಎ ಎಂಬ ಹೆಸರು ಹೇಳಿಕೊಂಡು ನಂಬಿಸಿ 15 ಲಕ್ಷ ರೂ ಹಣ ಪಡೆದು ವಂಚನೆ ಮಾಡಲಾಗಿದೆ.
ಗಮನಿಸಿ: ಅತ್ಯಾಚಾರಿಗಳ ಪರವಾಗಿದ್ದವರಿಗೆ ಶಿಕ್ಷಣ ಸಚಿವ ಸ್ಥಾನ-ಕನ್ನಡಿಗರು ತಲೆತಗ್ಗಿಸುವಂತಾಗಿದೆ:ಸಿದ್ದರಾಮಯ್ಯ
ಈ ಬಗ್ಗೆ ಮಂಜುನಾಥ ಹಂಚಿ ರವರು ದೂರು ನೀಡಿದ್ದು, ದೂರಿನ ಮೇರೆಗೆತುಂಗಾನಗರ ಪೊಲೀಸ್ ಠಾಣಾ ಗುನ್ನೆ ನಂ-504/2026 ಕಲಂ 318(4) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲು ಮಾಡಿದ್ದರು.
ಈ ಪ್ರಕರಣದ ಆರೋಪಿಯ ಪತ್ತೆಗಾಗಿ ಎಸ್ಪಿ ನಿಖಿಲ್.ಬಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎ.ಜಿ.ಕಾರಿಯಪ್ಪ ಹಾಗೂ ಶಿವಮೊಗ್ಗ–ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶೀಲವಂತ ಹೊಸಮನಿ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ ಪೆಕ್ಟರ್ ಕೆ.ಟಿ ಗುರುರಾಜ್ , ಪಿ.ಎಸ್.ಐ ಮಂಜಮ್ಮ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಶೋಭರಾಣಿ, ನಾಗರಾಜ, ಹರೀಶ್ ನಾಯ್ಕ, ನಿತಿನ್, ತಮ್ಮಣ್ಣ ಜಂಬಗಿ ರವರನ್ನೊಳಗೊಂಡ ತಂಡವು ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲ್ಲೂಕ್ ಚಿಕ್ಕ ಅಂಗಳ ಗ್ರಾಮದ ರಸ್ತೆಯ ಬಳಿ ಆರೋಪಿತನಾದ ಶಿವಮೊಗ್ಗದ ಶರಾವತಿನಗರ ನಿವಾಸಿ ಹೇಮಂತ್ ಕುಮಾರ್ @ ಗಣೇಶ ಬಿನ್ ಕುಮಾರ್ 30 ವರ್ಷ ಈತನನ್ನು 29/07/2026 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
