ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.30
ಆರ್‌ಎಸ್‌ಎಸ್ ಗೆ ರಕ್ಷಣೆ ಬೇಕಾದರೆ ನೊಂದಣಿ ಮಾಡಿಸಿಕೊಳ್ಳಬೇಕು ಎನ್ನುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಅವರು ಪಕ್ಷದಲ್ಲೆ ಸಹಕಾರ ಇಲ್ಲ. ಅಭಿಮತ ವ್ಯಕ್ತಪಡಿಸಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.
ಅವರು ಗುರುವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ನೊಂದಣಿ ಕುರಿತು ಪ್ರಿಯಾಂಕ್ ಖರ್ಗೆ ದಾಷ್ಟ್ಯದ ಮಾತುಗಳನ್ನು ಆಡುತ್ತಿದ್ದಾರೆ. ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ನಾನು ಒಬ್ಬ ಗೃಹ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗೀನ ಗೃಹ ಸಚಿವರು ಹೇಳಿದಂತೆ ಮಾಡಲು ಆಗುವುದಿಲ್ಲ. ಪ್ರತಿಯೊಬ್ಬ ನಾಗರೀಕನಿಗೂ ರಕ್ಷಣೆ ಕೊಡಬೇಕು. ಮಾನ, ಪ್ರಾಣ ಕಾಪಾಡುವುದು ಗೃಹ ಇಲಾಖೆಯ ಜವಾಬ್ದಾರಿ ಎಂದರು.
ಗಮನಿಸಿ: ಮುಖ್ಯಮಂತ್ರಿ ಪಿಎ ಎಂದುಕೊಂಡು 15 ಲಕ್ಷ ವಂಚನೆ : ನ್ಯಾಯಾಂಗ ಬಂಧನ
ಇದೇ ಕಾಂಗ್ರೆಸ್ ಸರ್ಕಾರ 2017 ರಲ್ಲಿ 13 ಸಾವಿರ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಓಪನ್ ಮಾಡಿತ್ತು. ರಾಜಕೀಯವಾಗಿ, ಸೈದ್ದಾಂತಿಕ ಎದುರಿಸಲು ನಮಗ್ಯಾವುದೇ ತೊಂದರೆ ಇಲ್ಲ. ಆದರೆ ತನ್ನ ಅಧಿಕಾರವಧಿಯಲ್ಲಿ ಪೊಲೀಸ್ ರನ್ನು ಬಳಿಸಿಕೊಂಡು ಎದುರಿಸುವ ಪ್ರಯತ್ನ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಹತಾಶೆ ಪ್ರಯತ್ನ. ಈ ರೀತಿ ಕೇಸ್ ಹಾಕುವುದರಿಂದ ಅವರು ಉದ್ದಾರವಾಗುತ್ತೇವೆ ಎಂದುಕೊAಡಿದ್ದಾರೆ ಎಂದು ಕುಟುಕಿದರು.
ಯಶಪಾಲ್ ಸುವರ್ಣ ಮೇಲೆ ಕೇಸ್ ದಾಖಲಾಗಿದೆ. ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಪರಿಶೀಲಿಸುತ್ತಿದ್ದೇವೆ. ಇದೇ ರೀತಿ ಬೇರೆ ಬೇರೆ ಶಾಸಕ ಮೇಲು ಕೇಸ್ ಹಾಕುತ್ತಿದ್ದಾರೆ. ಎಂಎಲ್‌ಸಿ ಸಿ.ಟಿ ರವಿ ಅವರ ಮೇಲೆ ಪ್ರಬಲವಾಗಿ ಕೇಸ್ ಹಾಕುತ್ತಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಇಲಾಖೆಯನ್ನು ಸುಧಾರಣೆ ಮಾಡುವ ಚಿಂತೆ ಇಲ್ಲ. ರಾಜ್ಯದಲ್ಲಿ ದಿನ ನಿತ್ಯ ಅಪರಾಧಗಳು, ಕೊಲೆಗಳು ನಡೆಯುತ್ತಿವೆ. ಅದನ್ನು ಪರಿಗಣಿಸದೆ ರಾಜಕೀಯ ವಿರೋಧಿಗಳ ಮೇಲೆ ದಾಳ ಉರುಳಿಸುವುದು ಹೇಗೆ, ಪೊಲೀಸರನ್ನು ಎತ್ತುಕಟ್ಟುವುದು ಹೇಗೆ ಎಂದು ನೋಡುತ್ತಿದ್ದಾರೆ. ಅವರ ಮಾತಿಗೆ ಒಗೊಟ್ಟು ಪೊಲೀಸ್ ಅಧಿಕಾರಿಗಳು ಇದನ್ನು ಮಾಡುತ್ತಿದ್ದಾರೆ. ಹೀಗೆ ಆದರೆೆ ಮುಂದಿನ ದಿನಗಳಲ್ಲಿ ಅವರಿಗೂ ಕೆಲಸ ಮಾಡುವುದು ಕಷ್ಟು ಆಗುತ್ತೆ ಎಂದರು.
ರಾಜ್ಯವನ್ನು ಸಮರ್ಥವಾಗಿ ಆಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಎರಡು ತಿಂಗಳು ಸಿಎಂ ಬದಲಾವಣೆ ಹೊಯ್ತು. ಈಗ ಸಚಿವ ಸಂಪುಟ ವಿಸ್ತರಣೆಗ ಸರ್ಕಸ್ ನಡೆಯುತ್ತಾ ಇದೆ. ಇಡೀ ಸರ್ಕಾರ ದೆಹಲಿಯಲ್ಲಿ ಕುಳಿತುಕೊಂಡಿದೆ. ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ. ಕಾಂಗ್ರೆಸ್‌ಗೆ 140 ಸೀಟ್ ಕೊಟ್ಟರು ಸರ್ಕಾರ ನಡೆಸಲು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದರು.
