ಶಿವಮೊಗ್ಗ,ಅ.24: ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಆರ್‌ಎಸ್‌ಎಸ್‌ನವರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅವರು ಶನಿವಾರ ಮಾಧ್ಯಮಗಾರೊಂದಿಗೆ ಮಾತನಾಡಿ, ಸ್ಟಿಂಗ್ ಆಪರೇಷನ್ ಎಂಬ ಕೃತ್ಯ ಈಗೀನಿಂದ ರೂಪಗೊಂಡಿರುವುದಲ್ಲ. ಕಿತ್ತೂರಿನಿಂದ ಹಿಡಿದು ಹಾಗೂ ದೇವೇಂದ್ರಪ್ಪ ಕಾಳಪ್ಪನವರ ಕಾಲದಿಂದ ಹಿಡಿದು ಬಹಳಷ್ಟು ಜನ ರಾಜಕೀಯ ಸೇಡನ್ನು ತಿರಿಸಿಕೊಳ್ಳಲು ಇದನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಅದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಗುಜರಾತ್ ಮಹಾನೀಯರು. ಇವರೇ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ ಉಸ್ತುವಾರಿಯಾಗಿದ್ದ ಸಂಜಯ್ ಜೋಷಿ ಅವರ ಸ್ಟಿಂಗ್ ಆಪರೇಷನ್ ಮಾಡಿ ಮುಗಿಸಿದರು. ಈ ಸ್ಟಿಂಗ್ ಆಪರೇಷನ್ ಸಂಪ್ರದಾಯದ ಕೀರ್ತಿ ಆ ಮಹಾನೀಯರಿಗೆ ಸಲ್ಲುತ್ತದೆ ಎಂದರು.
ಗೋಡ್ಸೆ ಮೊಟ್ಟ ಮೊದಲ ಭಯೋತ್ಪಾದಕ:
ಗಾಂಧಿಜಿಯವರು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿ, ಮಹಾತ್ಮ ಗಾಂಧಿಯನ್ನು ಕೊಂದಿರುವ ಸಂಘಟನೆಗಳು ದೇಶದ ಮೊಟ್ಟ ಮೊದಲು ಭಯೋತಾದಕ ಸಂಘಟನೆ ಹಾಗೂ ಅವರನ್ನು ಕೊಲೆ ಮಾಡಿ ನಾಥುರಾಮ್ ಗೋಡ್ಸೆ ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕ. ಬಿಜೆಪಿ ಅವರು ನಿಜವಾದ ದೇಶಭಕ್ತರಾಗಿದ್ದರೆ. ಸ್ವಾತಂತ್ರ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತ ದೇಶದ ಮೇಲೆ ನಂಬಿಕೆ ಇದ್ದರೆ ಇದನ್ನು ಒಪ್ಪಿಕೊಳ್ಳಬೇಕು ಎಂದರು.
