Homeಜಿಲ್ಲೆಮೋದಿ 12 ವರ್ಷದಲ್ಲಿ 12 ಐತಿಹಾತಿಕ ನಿರ್ಣಯ: ಬಿ.ವೈ. ರಾಘವೇಂದ್ರ

ಮೋದಿ 12 ವರ್ಷದಲ್ಲಿ 12 ಐತಿಹಾತಿಕ ನಿರ್ಣಯ: ಬಿ.ವೈ. ರಾಘವೇಂದ್ರ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.12

ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ದೀರ್ಫವಧಿಯಾಗಿ ಅಧಿಕಾರ ನಡೆಸಿದ್ದು, 12 ವರ್ಷದಲ್ಲಿ 12 ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ನರೇಂದ್ರ ಮೋದಿವರು 12 ವರ್ಷ ಪ್ರಧಾನಿಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅತೀ ಹೆಚ್ಚು ಅವಧಿ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಗಮನಿಸಿ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಈ ದೇಶಕ್ಕಾಗಿ ದುಡಿಯುತ್ತಿದ್ದಾರೆ. ದೇಶದ ಜಿಡಿಪಿಯನ್ನು 331 ಲಕ್ಷ ಕೋಟಿಗೆ ಏರಿಸಿದ್ದಾರೆ. ಜನ್‌ಧನ್, ಡಿಜಿಟಲ್ ಇಂಡಿಯಾದಂತಹ ಯೋಜನೆಯನ್ನು ಜಾರಿ ಮಾಡಿದ್ದು, ಯುಪಿಐ ನಲ್ಲಿ ಭಾರತ ದೇಶ ವಿಶ್ವಗುರುವಾಗಿದೆ. ಡಿಜಿಟಲ್ ನಲ್ಲಿ ಸುಮಾರು 2250 ಕೋಟಿ ವಹಿವಾಟು ನಡೆಯುತ್ತಿದ್ದು, ಹಿಂದಿಗಿಂತ 9 ಪಟ್ಟು ವಹಿವಾಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇಶದಲ್ಲಿ 15 ಕೋಟಿ ಮನೆಗಳಿಗೆ ನೀರನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಕೋವಿಡ್ ಹಾಗೂ ಯುದ್ದ ಸಂದರ್ಭದಲ್ಲೂ ಎದೆಗುಂದದೆ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ ಹೊಡೆತ ಬೀಳದಂತೆ ಕಾಪಾಡಿದ್ದಾರೆ. ಅದರಿಂದ ಇಂದು ವಿಶ್ವದಲ್ಲಿ ಭಾರತ ದೇಶ ಆರ್ಥಿಕತೆಯಲ್ಲಿ 11 ರಿಂದ 4 ನೇ ಸ್ಥಾನಕ್ಕೆ ಬಂದಿದೆ. ರಾಷ್ಟ್ರ ರಕ್ಷಣೆಗೆ ಪಣತೊಟ್ಟಿರುವ ಮೋದಿಯವರು ಭಯೋತ್ಪಾದನೆಯಿಂದ ದೇಶವನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಯಾವುದೇ ತಾರತಮ್ಯ ನಮ್ಮ ಸರ್ಕಾರ ಮಾಡಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಹಂಚಿಕೆ ಮಾಡಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments