Homeಜಿಲ್ಲೆನಾಳೆ ಸಿವಿಲ್ ಪೊಲೀಸ್ ಪರೀಕ್ಷೆ: ಜಿಲ್ಲೆಯ 28 ಕೇಂದ್ರಗಳಲ್ಲಿ ಪೊಲೀಸ್‌ರಿಂದ ಏನೆಲ್ಲಾ ಸಿದ್ದತೆ? ಇಲ್ಲಿದೆ ಮಾಹಿತಿ

ನಾಳೆ ಸಿವಿಲ್ ಪೊಲೀಸ್ ಪರೀಕ್ಷೆ: ಜಿಲ್ಲೆಯ 28 ಕೇಂದ್ರಗಳಲ್ಲಿ ಪೊಲೀಸ್‌ರಿಂದ ಏನೆಲ್ಲಾ ಸಿದ್ದತೆ? ಇಲ್ಲಿದೆ ಮಾಹಿತಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1

ನಾಳೆ ಕೆಇಎಯಿಂದ ನಡೆಯಲಿರುವ ಕರ್ನಾಟಕ ಸಿವಿಲ್ ಪೊಲೀಸ್ ಪೇದೆ ಪರೀಕ್ಷೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸಕಲ ಸಿದ್ದತೆ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ಪರೀಕ್ಷೆಗೆ 28 ಕೇಂದ್ರಗಳು ಸಿದ್ದವಾಗಿದ್ದು, ಪರೀಕ್ಷೆಯು ಬೆಳಿಗ್ಗೆ 10.30 ರಿಂದ 12 ರವೆಗೆ ನಡೆಯಲಿದೆ. ಕೇಂದ್ರಕ್ಕೆ ಹಾಜರಾಗುವ ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯ ಭದ್ರತಾ ತಪಾಸಣೆಗೆ ಒಳಪಡಿಸಲಾಗಿತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಾ ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿದಂತೆ ಬಹು ಗುರುತಿನ ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸೂಚನಾ ಫಲಕಗಳನ್ನು ಬಿಡುಗಡೆ ಮಾಡುವ ಮೂಲಕ ತಿಳಿಸಿದೆ.

ಗಮನಿಸಿ: ನೇಮಕಾತಿಯಲ್ಲಿ ಅಕ್ರಮ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ; ಶಾಸಕ

ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರ್ಮಿಕ ದಾರಗಳು, ಮೂಗುತ್ತಿ, ತಾಳಿಯನ್ನು ಧರಿಸುವಂತಿಲ್ಲ ಎಂಬ ನಿಯಮವಿತ್ತು. ಆದರೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದೆಂದು ಉದ್ದೇಶದಿಂದ ಈ ನಿಯಮ ರದ್ದು ಮಾಡಿದ್ದು, ಜನಿವಾರ, ಶಿವದಾರ, ಧಾರ್ಮಿಕ ದಾರಗಳು ಒಳಗೊಂಡಂತೆ ತಾಳಿ, ಮೂಗುತ್ತಿ ಧರಿಸುವ ಅವಕಾಶ ನೀಡಿದೆ. ವಸ್ತç ಸಂಹಿತೆ, ಪರೀಕ್ಷೆ ಕೇಂದ್ರಕ್ಕೆ ಹೇಗೆ ಬರಬೇಕೆಂಬ ಮಾಹಿತಿಯನ್ನು ನೀಡುವ ಮೂಲಕ ಪರೀಕ್ಷೆಯ ಅಭ್ಯರ್ಥಿಗಳನ್ನ ನಿರಾಳ ಮಾಡುವ ಕಾರ್ಯ ಮಾಡಿದೆ.

ಈ ನಿಯಮಮದಂತೆ ಪೊಲೀಸ್ ಇಲಾಖೆ ಜಾಗೃತೆಯಿಂದ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಇನ್ನೂ ಪರೀಕ್ಷೆಗೆ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆಯ ಕ್ರಮಗಳ ಬಗ್ಗೆ ಹಾಗೂ ಪರೀಕ್ಷೆಗೆ ನಿಷೇಧಿತ ವಸ್ತುಗಳ ಅಥವಾ ಸಾಧನಗಳ ಬಗ್ಗೆ ಸೂಚನಾ ಫಲಕ ಮೂಲಕ ಮಾಹಿತಿ ನೀಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments